Select Your Language

Notifications

webdunia
webdunia
webdunia
webdunia

ಮತ್ತೆ ಇಡಿ ಸಮನ್ಸ್ ಗೆ ಚಕ್ಕರ್ ಹೊಡೆದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಮತ್ತೆ ಇಡಿ ಸಮನ್ಸ್ ಗೆ ಚಕ್ಕರ್ ಹೊಡೆದ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಮುಂಬೈ , ಶನಿವಾರ, 16 ಅಕ್ಟೋಬರ್ 2021 (16:12 IST)
ಮುಂಬೈ: 200 ಕೋಟಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇಡಿ ಮುಂದೆ ಹಾಜರಾಗಲು ಮತ್ತೆ ವಿಫಲರಾಗಿದ್ದಾರೆ.

Photo Courtesy: Google

ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಗೆ ಜಾರಿ ನಿರ್ದೇಶನಾಲಯ ಎರಡನೇ ಬಾರಿ ಸಮನ್ಸ್ ನೀಡಿತ್ತು. ಆದರೆ ನಟಿ ತನಗೆ ವೃತ್ತಿಪರ ಕೆಲಸಗಳಿಂದಾಗಿ ಹೇಳಿದ ಸಮಯಕ್ಕೆ ವಿಚಾರಣೆಗೆ ಬರಲು ಆಗುತ್ತಿಲ್ಲ. ನವಂಬರ್ ಮೊದಲ ವಾರದವರೆಗೆ ಸಮಯ ಕೊಡಿ ಎಂದು ಮನವಿ ಮಾಡಿದ್ದಾರೆ.

ಆದರೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮನವಿ ತಿರಸ್ಕರಿಸಿದ್ದು, ಸೋಮವಾರವೇ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲು ಸಾಲು ಸಿನಿಮಾಗಳಿಂದ ಗೆದ್ದ ಸ್ಯಾಂಡಲ್ ವುಡ್