Select Your Language

Notifications

webdunia
webdunia
webdunia
webdunia

ಇನ್ನೂ ಏನೇನು ನೋಡ್ಬೇಕೋ ಈ ಕಣ್ಣಲ್ಲಿ: ರಾಮಚಾರಿ ಸೀರಿಯಲ್ ನ ಚಾರು ಫೈಟ್ ಸೀನ್ ಸಖತ್ ಟ್ರೋಲ್

Mouna Guddemane

Krishnaveni K

ಬೆಂಗಳೂರು , ಶುಕ್ರವಾರ, 14 ಫೆಬ್ರವರಿ 2025 (10:39 IST)
Photo Credit: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರವಾಹಿಯಲ್ಲಿ ನಾಯಕಿ ಚಾರುಲತಾ ಫೈಟಿಂಗ್ ಸೀನ್ ಒಂದರ ಪ್ರೋಮೋ ಹರಿಯಬಿಡಲಾಗಿದ್ದು ಇದನ್ನು ನೋಡಿ ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ ಎಂದು ಟ್ರೋಲ್ ಮಾಡಿದ್ದಾರೆ.

ಧಾರವಾಹಿಯಲ್ಲಿ ಈಗ ನಾಯಕ ರಾಮಚಾರಿ ತಂಗಿಯನ್ನು ಆಕೆಯ ಪ್ರಿಯಕರ ಮೋಸ ಮಾಡಿ ಗರ್ಭಿಣಿ ಮಾಡಿರುತ್ತಾನೆ. ಆದರೆ ಮದುವೆ ವಿಚಾರ ಬಂದಾಗ ಕೈ ಎತ್ತುತ್ತಾನೆ. ಇದರಿಂದಾಗಿ ರಾಮಚಾರಿ ತಾಯಿ, ತಂಗಿ ದಿಕ್ಕೆಟ್ಟು ಕೂತಿರುತ್ತಾರೆ.

ಈ ವಿಚಾರ ತಿಳಿದ ನಾಯಕಿ ಚಾರುಲತಾ ಈಗ ತನ್ನ ಅತ್ತೆ ಮತ್ತು ನಾದಿನಿಯನ್ನು ಕಾಪಾಡಿ ತನ್ನ ಮನೆಯ ಮಾನ ಕಾಪಾಡೋದಿಕ್ಕೆ ದುರ್ಗಿಯ ಅವತಾರ ತಾಳುತ್ತಾಳೆ. ನಾದಿನಿಗೆ ಕಾಟ ಕೊಡುತ್ತಿರುವ ಪ್ರಿಯಕರ ಮತ್ತು ಆತನ ಸಂಗಡಿಗರೊಂದಿಗೆ ಚಾರು ಫೈಟ್ ಮಾಡುತ್ತಾಳೆ.

ಜೀಪ್ ಏರಿಕೊಂಡು ಪಕ್ಕಾ ಮಾಲಾಶ್ರೀ ಸ್ಟೈಲ್ ನಲ್ಲಿ ಕನ್ನಡ ಹಾಕಿಕೊಂಡು ಬಂದು ಸೀರೆ ಉಟ್ಟುಕೊಂಡೇ ಫೈಟಿಂಗ್ ಮಾಡಿ ಎಲ್ಲರನ್ನೂ ಮಕಾಡೆ ಮಲಗಿಸುತ್ತಾಳೆ. ಆಕೆಯ ಫೈಟಿಂಗ್ ದೃಶ್ಯ ಈಗ ಸಖತ್ ಟ್ರೋಲ್ ಆಗುತ್ತಿದೆ. ಈ ಸೀರಿಯಲ್ ನಲ್ಲಿ ಹೀರೋ ಬರೀ ಲೆಕ್ಕಕ್ಕೆ. ಇದರ ಹೆಸರು ಬದಲಿಸಿ ಚಾರುಲತಾ ಎಂದು ಇಡಬಹುದಿತ್ತು ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಫೈಟಿಂಗ್ ಮಾಡುವಾಗ ಚಾರು ವಿಗ್ ಹೇರ್ ಬಿದ್ದೋಗಲ್ವಾ ಎಂದು ಕಾಲೆಳೆದಿದ್ದಾರೆ. ಇನ್ನು, ಖಾರದ ಪುಡಿ ಎರಚುವಾಗ ಚಾರು ಸನ್ ಗ್ಲಾಸ್ ಹಾಕಿಕೊಂಡಿರುತ್ತಾಳೆ. ಹೀಗಾಗಿ ಏನೂ ಆಗಲ್ಲ. ಇದನ್ನೆಲ್ಲಾ ನೋಡಿ ನೆಟ್ಟಿಗರು ಇದೆಲ್ಲಾ ರಾಮ್ ಜಿ (ರಾಮಚಾರಿ ನಿರ್ದೇಶಕ ಕಮ್ ನಿರ್ಮಾಪಕ) ಸೀರಿಯಲ್ ನಷ್ಟೇ ಸಾಧ್ಯ ಎಂದು ತಮಾಷೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಮದುವೆಯಾಗುತ್ತಿರುವ ಡಾ ಧನ್ಯತಾ ಬಗ್ಗೆ ತಿಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ