ಬೆಂಗಳೂರು: ನಟ ಡಾಲಿ ಧನಂಜಯ ಗೆಳತಿ ಡಾ ಧನ್ಯತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಾ ಧನ್ಯತಾ ಬಗ್ಗೆ ತಿಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ.
ಡಾಲಿ ಧನಂಜಯ ಮತ್ತು ಡಾ ಧನ್ಯತಾ ಮದುವೆ ಮೈಸೂರಿನಲ್ಲಿ ಇದೇ ಭಾನುವಾರ ನಡೆಯಲಿದೆ. ಅಭಿಮಾನಿಗಳಿಗಾಗಿಯೇ ಧನಂಜಯ ಅದ್ಧೂರಿಯಾಗಿ ಮದುವೆಯಾಗುತ್ತಿದ್ದು, ಊಟ ಹಾಕಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿವೆ.
ಡಾಲಿ ಮದುವೆಯಾಗುತ್ತಿರುವ ಹುಡುಗಿ ಧನ್ಯತಾ ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ. ರೂಪದಲ್ಲಿ ಸುಂದರಿ ಜೊತೆಗೆ ಅಷ್ಟೇ ವಿದ್ಯಾವಂತೆ ಕೂಡಾ. ಡಾ ಧನ್ಯತಾ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಫರ್ಟಿಲಿಟಿ ಸ್ಪೆಷಲಿಸ್ಟ್ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.
ಸ್ತ್ರೀರೋಗ ಮತ್ತು ಫರ್ಟಿಲಿಟಿ ವಿಭಾಗದಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. 2015 ರಲ್ಲಿ ವೈದ್ಯ ಪದವಿ ಮುಗಿಸಿರುವ ಆಕೆ ಇಂದಿಗೆ ಎಷ್ಟೋ ಜನರ ಪಾಲಿಗೆ ಆಶಾಕಿರಣವಾಗಿದ್ದಾರೆ. ವೈದ್ಯೆಯಾಗಿ ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆಕೆ ಈಗ ನಟ ಡಾಲಿ ಧನಂಜಯ ಮಡದಿಯಾಗುತ್ತಿದ್ದಾರೆ. ಧನಂಜಯ ಅವರಂತೆ ಅವರಿಗೂ ಸಮಾಜ ಸೇವೆಯಲ್ಲಿ ಆಸಕ್ತಿಯಿದೆ.