Select Your Language

Notifications

webdunia
webdunia
webdunia
webdunia

ನಾನು ಹೈದರಾಬಾದ್ ನವಳು ಎಂದ ರಶ್ಮಿಕಾ ಮಂದಣ್ಣ: ಕರ್ನಾಟಕವನ್ನು ಮರೆತೇ ಬಿಟ್ಟ ಸುಂದರಿ

Rashmika Mandanna

Krishnaveni K

ಹೈದರಾಬಾದ್ , ಶುಕ್ರವಾರ, 14 ಫೆಬ್ರವರಿ 2025 (10:03 IST)
ಹೈದರಾಬಾದ್: ಪರಭಾಷೆಗಳಲ್ಲಿ ಮಿಂಚಿದ ಮೇಲೆ ಕನ್ನಡವನ್ನು ಮರೆತೇ ಬಿಟ್ಟಿದ್ದಾರೆಂಬ ಟೀಕೆಗೊಳಗಾಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ನಾನು ಹೈದರಾಬಾದ್ ನವಳು ಎಂದು ಕನ್ನಡಿಗರ ಟೀಕೆಗೆ ಗುರಿಯಾಗಿದ್ದಾರೆ.

ಕಿರಿಕ್ ಪಾರ್ಟಿ ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಬಳಿಕ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡು ಬ್ರೇಕ್ ಅಪ್ ಕೂಡಾ ಮಾಡಿಕೊಂಡಿದ್ದರು. ಅದಾದ ಬಳಿಕ ಅವರು ಕನ್ನಡಕ್ಕೆ ಗುಡ್ ಬೈ ಹೇಳಿ ತೆಲುಗಿನಲ್ಲೇ ಹಿಟ್ ಸಿನಿಮಾ ಕೊಡುತ್ತಾ ಅಲ್ಲೇ ಸೆಟಲ್ ಆಗಿದ್ದಾರೆ.

ಹಿಂದೊಮ್ಮೆ ಕನ್ನಡ ಕಷ್ಟದ ಭಾಷೆ ಎಂದಿದ್ದ ರಶ್ಮಿಕಾ ಇದೀಗ ನಾನು ಹೈದರಾಬಾದ್ ನವಳು ಎಂದು ಮತ್ತೊಮ್ಮೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬಾಲಿವುಡ್ ನ ಛಾವಾ ಸಿನಿಮಾದ ಈವೆಂಟ್ ನಲ್ಲಿ ಮಾತನಾಡಿರುವ ರಶ್ಮಿಕಾ ‘ನಾನು ಹೈದರಾಬಾದ್ ನವಳು. ಅಲ್ಲಿಂದ ಒಬ್ಬಳೇ ಬಂದಿದ್ದೆ.ಬಹುಶಃ ಈಗ ನಾನು ನಿಮ್ಮ ಕುಟುಂಬದ ಭಾಗವಾಗಿದ್ದೇನೆ’ ಎಂದಿದ್ದಾರೆ.

ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳೆದ ಮೇಲೆ ಹುಟ್ಟಿದ ಊರನ್ನೇ ಮರೆಯುವುದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ನಿಮ್ಮನ್ನು ಧ್ವೇಷಿಸಲು ನೀವೇ ಹೊಸ ಹೊಸ ಕಾರಣಗಳನ್ನು ಕೊಡುತ್ತಿದ್ದೀರಿ ಎಂದು ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಂಡವ್‌ಗೆ ಮಕ್ಕಳು ಬೇಕು ಹೆಂಡತಿ ಬೇಡ ಅಂದ್ರೆ ಹೆಂಡತಿ ಇಲ್ಲದೆ ಮಕ್ಕಳು ಬಂದ್ರ