ಭಾಗ್ಯಲಕ್ಷ್ಮೀ ಸೀರಿಯಲ್ ಇದೀಗ ಇಂಟ್ರೆಸ್ಟಿಂಗ್ ಕತೆಯೊಂದಿಗೆ ಪ್ರಸಾರವಾಗುತ್ತಿದೆ. ಗಂಡನ ಹಂಗಿನಿಂದ ಹೊರಬಂದು ತನ್ನ ಕುಟುಂಬದ ಹೊಣೆಯನ್ನು ಹೊತ್ತಿರುವ ಭಾಗ್ಯ, ಸಂಸಾರ ನಿರ್ವಹಣೆಗೆ ಹೊಸ ಕೆಲಸದ ಹುಡುಕಾಟದಲ್ಲಿದ್ದಾಳೆ.
ಇತ್ತ ತನ್ನ ತಂದೆ, ತಾಯಿ ಹಾಗೂ ಮಕ್ಕಳನ್ನು ತನ್ನತ್ತ ಮಾಡಿ, ಭಾಗ್ಯಳನ್ನು ಒಬ್ಬಂಟಿಯಾಗಿ ಮಾಡುತ್ತೇನೆ ಎಂದು ಪಣ ತೊಟ್ಟ ತಾಂಡವ್ ಮಕ್ಕಳನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದಾನೆ.
ಇದೀಗ ತನ್ವಿ ಬರ್ತಡೇಯನ್ನು ಹೇಗಾದರೂ ವಿಶೇಷವಾಗಿ ಆಚರಿಸಲು ಭಾಗ್ಯಾ ಪ್ಲ್ಯಾನ್ ಮಾಡುತ್ತಿದ್ದರೆ, ಅದೇ ನೆಪದಲ್ಲಿ ಮಗಳನ್ನು ಹೇಗಾದರೂ ತನ್ನ ಕಡೆ ಸೆಳೆಯಲು ತಾಂಡವ್ ಪ್ಲ್ಯಾನ್ ಮಾಡಿದ್ದಾನೆ. ಅದರಂತೆ ಇಡೀ ಕಾಲೇಜಿಗೆ ತಾಂಡವ್ ಮಗಳ ಹುಟ್ಟುಹಬ್ಬದ ಹಿನ್ನೆಲೆ ಸಿಹಿ ಹಂಚಿ ಮಗಳಿಗೆ ಸರ್ಪ್ರೈಸ್ ನೀಡಿದ್ದಾನೆ. ಖುಷಿಯಲ್ಲಿ ತನ್ವಿ ಅಪ್ಪನನ್ನು ತಬ್ಬಿ ಥ್ಯಾಂಕ್ಸ್ ಹೇಳಿದ್ದಾಳೆ.
ಇಂದಿನ ಪ್ರೋಮೋ ನೋಡಿದ ಭಾಗ್ಯಲಕ್ಷ್ಮೀ ಸೀರಿಯಲ್ ಅಭಿಮಾನಿಗಳು, ತಾಂಡವ್‌ಗೆ ಮಕ್ಕಳು ಬೇಕು ಹೆಂಡತಿ ಬೇಡ ಅಂದ್ರೆ ಹೆಂಡತಿ ಇಲ್ಲದೆ ಮಕ್ಕಳು ಬಂದ್ರ ಎಂದು ಪ್ರಶ್ನೆ ಮಾಡಿದರು.
ತುಂಬಾ ಡ್ರಾಮಾಟಿಕ್, ಓವರ್ ಆಯ್ತು ಎಂದು ಕಮೆಂಟ್ ಮಾಡಿದ್ದಾರೆ.