ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಒಂದು ರೋಚಕ ಟ್ವಿಸ್ಟ್ ಮುಂದೆ ಸಿಗಲಿದೆ. ಅದೇನೆಂದು ನೋಡಲು ಇಲ್ಲಿ ನೋಡಿ.
ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ಶ್ರೇಷ್ಠ ನಾನೇ ಕುಸುಮ ಅತ್ತೆ ಸೊಸೆ ಎಂದು ಹೇಳಿಕೊಂಡು ತಾಂಡವ್ ಮನೆಯಲ್ಲಿಯೇ ಝಾಂಡಾ ಹೂಡಿರುತ್ತಾಳೆ. ಆದರೆ ಶ್ರೇಷ್ಠಾಗೆ ಪಾಠ ಕಲಿಸಲು ಕುಸುಮ ಮತ್ತು ಭಾಗ್ಯ ಸೇರಿಕೊಂಡು ಚೆನ್ನಾಗಿ ಮನೆ ಕೆಲಸ ಮಾಡಿಸಿಕೊಳ್ಳುತ್ತಾರೆ.
ಕುಸುಮ ತನ್ನ ಪರ ಇದ್ದಾರೆಂದು ನಂಬಿರುವ ಶ್ರೇಷ್ಠಾ ಹೇಳಿದ ಕೆಲಸವನ್ನೆಲ್ಲಾ ಮಾಡಿ ಹೈರಾಣಾಗುತ್ತಾಳೆ. ಇತ್ತ ಭಾಗ್ಯ ತನ್ನ ಮಾವ ಸ್ಕೂಟರ್ ನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಕ್ಕೆ ಹೊಸ ಕಾರು ಕೊಡಿಸಲು ಮುಂದಾಗಿದ್ದಾಳೆ. ಇದು ತಾಂಡವ್ ಮತ್ತು ಶ್ರೇಷ್ಠಾ ಹೊಟ್ಟೆ ಉರಿಗೆ ಕಾರಣವಾಗಿದೆ.
ಈ ನಡುವೆ ಶ್ರೇಷ್ಠಾ ತನಗೆ ಕುಸುಮ ಅಮ್ಮ ಸಿಕ್ಕಾಪಟ್ಟೆ ಕೆಲಸ ಮಾಡಿಸುತ್ತಿದ್ದಾರೆ ಎಂದು ತಾಂಡವ್ ಗೇ ಚಾಡಿ ಹೇಳುತ್ತಾಳೆ. ತಾಂಡವ್ ಗೋ ತನ್ನ ಅಮ್ಮನ ಮೇಲೆ ಚಾಡಿ ಹೇಳುವ ಶ್ರೇಷ್ಠಾ ಮೇಲೆ ಇನ್ನಿಲ್ಲದ ಕೋಪ ಬರುತ್ತದೆ. ಹೀಗಾಗಿ ಈಗ ಈ ತಾಂಡವ್-ಶ್ರೇಷ್ಠಾ ಲವ್ ಸ್ಟೋರಿ ಮುರಿದು ಬೀಳುವ ಹಂತಕ್ಕೆ ಬಂದಿದೆ. ಸ್ವತಃ ತಾಂಡವ್ ತಾನಾಗಿಯೇ ಶ್ರೇಷ್ಠಾಳನ್ನು ದೂರ ಮಾಡುವ ಟ್ವಿಸ್ಟ್ ಕಹಾನಿಯಲ್ಲಿ ಬರುವ ಲಕ್ಷಣವಿದೆ.