Select Your Language

Notifications

webdunia
webdunia
webdunia
Thursday, 10 April 2025
webdunia

35ನೇ ವರ್ಷಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಭಾಗ್ಯಾ: ರಿಸಲ್ಟ್ ಏನಾಯ್ತು ಎಂದು ನೆಟ್ಟಿಗರು ಪ್ರಶ್ನೆ

SSLC Result

Sampriya

ಬೆಂಗಳೂರು , ಗುರುವಾರ, 9 ಮೇ 2024 (18:19 IST)
Photo Courtesy Facebook
ಮನೆ ನಡೆಸುವ ಸಲುವಾಗಿ ಕೆಲಸದ ಹುಡುಕಾಟದಲ್ಲಿದ್ದ ಭಾಗ್ಯಳಿಗೆ ಕೊನೆಗೂ ಸ್ಟಾರ್ ಹೊಟೇಲ್‌ನಲ್ಲಿ ಕೆಲಸ ಸಿಕ್ಕಿದ ಖುಷಿಯಲ್ಲಿದ್ದಾಳೆ. ಆದರೆ ನೆಟ್ಟಿಗರು ಮಾತ್ರ ಭಾಗ್ಯ ಇವತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಟಾಪ್ ರೇಟಿಂಗ್‌ನಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಬೇರೆಲ್ಲ ಧಾರವಾಹಿಗಿಂತ ವಿಭಿನ್ನವಾಗಿ ಕಥೆಯನ್ನು ಹೆಣೆಯುತ್ತಾ ಬಂದಿದೆ. ಅತ್ತೆ ಸೊಸೆ ಜಗಳ ಬಗ್ಗೆಯೇ ಸೀರಿಯಲ್‌ ಕೇಂದ್ರಿಕರಿಸುತ್ತಿರುವಾಗ ಭಾಗ್ಯಲಕ್ಷ್ಮೀ ಸೀರಿಯಲ್ ಮಾತ್ರ ಅತ್ತೆ ಸೊಸೆ ಹೀಗೂ ಇರಬಹುದು ಎಂದು ತೋರಿಸಿಕೊಟ್ಟಿತು.

ಗಂಡ ತಾಂಡವ್ ಪಾಲಿನಲ್ಲಿ ಜೀವನ ನಡೆಸುತ್ತಿರುವ ಭಾಗ್ಯ ತನ್ನವರನ್ನು ಸಾಕುವ ಸಲುವಾಗಿ ಹಾಗೂ ತಂಗಿ ಮದುವೆಗೆ ಶ್ರೇಷ್ಠನಿಂದ ಪಡೆದ ಸಾಲವನ್ನು ತೀರಿಸುವ ಸಲುವಾಗಿ ಬ್ರೋಕರ್ ಮೂಲಕ ಇದೀಗ ಕೆಲಸ ಗಿಟ್ಟಿಸಿಕೊಂಡಿದ್ದಾಳೆ.

ಸೊಸೆಯನ್ನು ದಡ್ಡಿ ಎಂದು ತಾತ್ಸರ ಮಾಡುತ್ತಿದ್ದ ಮಗನಿಗೆ ಬುದ್ಧಿ ಕಲಿಸಲು ಅತ್ತೆ ಕುಸುಮಾನೇ ಸೊಸೆಯನ್ನು ಹತ್ತನೇ ತರಗತಿಗೆ ಸೇರ್ಪಡಿಸಿ ಕುಸುಮಾ ಮಾದರಿಯಾಗಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಬರಬೇಕೆಂದು ಸೊಸೆಗೆ ಆಗಾಗ ಬುದ್ಧಿ ಹೇಳುತ್ತಲೇ ಬಂದಿದ್ದರು.

ಇದೀಗ ಇಂದು ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ನೆಟ್ಟಿಗರು ಭಾಗ್ಯಳಲ್ಲಿ ಫಲಿತಾಂಶ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.  ಭಾಗ್ಯ ಇವತ್ತು ಎಸ್ಸೆಸ್ಸೆಲ್ಸಿ ರಿಸಲ್ಟ್, ಭಾಗ್ಯ ನಿನ್ನ ಎಸ್ಸೆಸ್ಸೆಲ್ಸಿ ರಿಸಲ್ಟ್ ಏನಾಯ್ತು ಎಂದು ಕೇಳುತ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಶ್ರೀರಾಮನ ಹಾಡು ಹಾಡಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗಳಿಂದ ಗಲಾಟೆ