Select Your Language

Notifications

webdunia
webdunia
webdunia
webdunia

ಕಾಲಿವುಡ್‌ ನಟ ವಿಶಾಲ್‌ ಆರೋಗ್ಯದಲ್ಲಿ ಮತ್ತೆ ಏರುಪೇರು: ಅಪೋಲೊ ಆಸ್ಪತ್ರೆಗೆ ದಾಖಲು

Tollywood actor Vishal

Sampriya

ಚೆನ್ನೈ , ಮಂಗಳವಾರ, 7 ಜನವರಿ 2025 (14:17 IST)
Photo Courtesy X
ಚೆನ್ನೈ: ಟಾಲಿವುಡ್‌ ವಿಶಾಲ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಚೆಗೆ ತಮ್ಮ ಮದಗಜರಾಜ ಚಿತ್ರದ ಪ್ರೋಮೋಷನ್‌ನಲ್ಲಿ ಪಾಲ್ಗೊಂಡಿದ್ದ ಅವರು ತೀವ್ರ ಅಸ್ವಸ್ಥತೆಗೀಡಾಗಿದ್ದರು. ಅವರು ಮೈಕ್ ಹಿಡಿದಿದ್ದ ಕೈಗಳು ತೀವ್ರವಾಗಿ ನಡುಗುತ್ತಿದ್ದವು. ಮಾತುಗಳು ಕೂಡ ತೀವ್ರವಾಗಿ ತೊದಲುತ್ತಿದ್ದವು. ಇದು ವಿಶಾಲ್ ಅವರಿಗೆ ಏನೋ ಆಗಿದೆ ಎಂಬುದನ್ನು ಸಾಬೀತು ಪಡಿಸಿತ್ತು.

ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದರಿಂದ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ವಿಶಾಲ್ ಅವರು ಅತಿಯಾದ ಜ್ವರ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅವರನ್ನು ಇದೀಗ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ವಿಶಾಲ್ ಗೆ ವೈರಲ್ ಫೀವರ್ ಇರುವ ಕುರಿತು ಸ್ಪಷ್ಟನೆ ನೀಡಿದ್ದು ಇದೇ ಕಾರಣಕ್ಕೆ ಅವರು ತೀವ್ರ ನಿಶ್ಯಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ಕೂಡ ನಟ ವಿಶಾಲ್ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ವಿಶಾಲ್ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಮತ್ತು ಕೆಲವು ದಿನಗಳವರೆಗೆ ಸಂಪೂರ್ಣ ಬೆಡ್ ರೆಸ್ಟ್ ಅಗತ್ಯವಿದೆ ಎಂದು ದೃಢಪಡಿಸಿದ್ದಾರೆ. ಇದಲ್ಲದೆ ವಿಶಾಲ್ ಕೆಲವು ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ವರದಿ ಹೇಳಿದೆ.

ಸುಂದರ್ ಸಿ ನಿರ್ದೇಶನದ ಮದಗಜರಾಜ ಚಿತ್ರದಲ್ಲಿ ವಿಶಾಲ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ಹಾಸ್ಯ ಕಲಾವಿದ ಸಂತಾನಂ, ವರಲಕ್ಷ್ಮಿ ಶರತ್‌ಕುಮಾರ್, ಸತೀಶ್, ನಿತಿನ್ ಸತ್ಯ, ಸೋನು ಸೂದ್, ಅಂಜಲಿ ಮತ್ತು ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮಾಯಿಲ್‌ಸಾಮಿ ಮತ್ತು ಚಿಟ್ಟಿ ಬಾಬು ಕೂಡ ನಟಿಸಿದ್ದಾರೆ. ಇದೇ 12ರಂದು ಚಿತ್ರ ರಿಲೀಸ್‌ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Allu Arjun: ನಾನಿದ್ದೇನೆ, ಸಂಧ್ಯಾ ಥಿಯೇಟರ್ ನಲ್ಲಿ ಗಾಯಗೊಂಡಿದ್ದ ಮಗುನ ಭೇಟಿ ಮಾಡಿದ ಅಲ್ಲು ಅರ್ಜುನ್