ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿದ್ದ ನಟಿ ಅನುಷಾ ರೈ ಈಗ ಚೀನಾ ಪ್ರವಾಸದಲ್ಲಿದ್ದಾರೆ. ಅವರ ಲೇಟೆಸ್ಟ್ ವಿಡಿಯೋಗಳನ್ನು ನೋಡುತ್ತಿದ್ದರೆ ಚೀನಾದಲ್ಲಿ ಪ್ರಸ್ತುತ ಎಚ್ಎಂಪಿವಿ ವೈರಸ್ ತಾಂಡವವಾಡುತ್ತಿದೆ ಎನ್ನುವ ಮಾಧ್ಯಮ ವರದಿಗಳೆಲ್ಲಾ ಸುಳ್ಳು ಎನ್ನುವಂತೆ ಅನಿಸುತ್ತಿದೆ.
ಬಿಬಿಕೆಯಿಂದ ಎಲಿಮಿನೇಟ್ ಆದ ಅನುಷಾ ಈಗ ತಮ್ಮ ಖಾಸಗಿ ಕಾರ್ಯಕ್ರಮ ನಿಮಿತ್ತ ಚೀನಾದಲ್ಲಿದ್ದಾರೆ. ಚೀನಾದ ರಸ್ತೆಯಲ್ಲಿ, ರೆಸ್ಟೋರೆಂಟ್ ನಲ್ಲಿ ಓಡಾಡುತ್ತಿರುವ ವಿಡಿಯೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾಧ್ಯಮ ವರದಿಗಳಲ್ಲಿ ಈಗ ಚೀನಾದಲ್ಲಿ ಎಚ್ಎಂಪಿವಿ ವೈರಸ್ ಹೆಚ್ಚಾಗಿದೆ. ಜನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಅನುಷಾ ಅಲ್ಲಿನ ರಸ್ತೆಗಳಲ್ಲಿ ಓಡಾಡುವಾಗ ತೆಗೆದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಜನ ಮಾಸ್ಕ್ ಇಲ್ಲದೇ ಆರಾಮವಾಗಿ ಗುಂಪು ಗುಂಪಾಯಿಗೇ ಓಡಾಡುತ್ತಿದ್ದಾರೆ. ಅಂತಹದ್ದೊಂದು ರೋಗವಿದೆ ಎಂಬ ಕೊಂಚವೂ ಆತಂಕ ಅಲ್ಲಿನ ಜನರಲ್ಲಿ ಕಾಣುತ್ತಿಲ್ಲ. ಹೀಗಾಗಿ ಮಾಧ್ಯಮ ವರದಿಗಳೆಲ್ಲವೂ ಸುಳ್ಳೇನೋ ಅನಿಸುವಂತಿದೆ.
ಅನುಷಾ ಮಾತ್ರವಲ್ಲದೆ, ಚೀನಾದಲ್ಲಿರುವ ಕೆಲವು ಭಾರತೀಯರೂ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದು, ಇಲ್ಲಿ ಎಲ್ಲವೂ ನಾರ್ಮಲ್ ಆಗಿದೆ. ವೈರಸ್ ನ ಯಾವುದೇ ಆತಂಕವೂ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಎಚ್ಎಂಪಿವಿ ವೈರಸ್ ಎನ್ನುವುದು ಅಷ್ಟೊಂದು ಆತಂಕ ಪಡುವ ವಿಷಯವೇ ಅಲ್ಲ ಎಂದು ಹೇಳಿದ್ದಾರೆ.