ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾಗೆ ಇಂದು ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಖಾಸಗಿ ರೆಸಾರ್ಟ್‌ನಲ್ಲಿ ಹರಿಪ್ರಿಯಾಗೆ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಸಿನಿಮಾ ರಂಗದ ಆಪ್ತರು, ಕುಟುಂಬದವರು ಭಾಗಿಯಾಗಿ ಹರಿಪ್ರಿಯಾ- ವಸಿಷ್ಠ ದಂಪತಿಗೆ ಶುಭಹಾರೈಸಿದ್ದಾರೆ.
ಈ ಸಮಾರಂಭದಲ್ಲಿ ಹಿರಿಯ ನಟಿ ತಾರಾ ಕೂಡಾ ಭಾಗವಹಿಸಿ ದಂಪತಿಗೆ ಶುಭಕೋರಿದ್ದಾರೆ. ಕುಂಕುಮ ಹಚ್ಚಿ, ಅಕ್ಷತೆ ಹಾಕಿ ಒಳ್ಳೆಯಾದಾಗಲಿ ಎಂದು ಹಾರೈಸಿದ್ದಾರೆ.
ಈ ವಿಡಿಯೋವನ್ನು ನಟಿ ತಾರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಹರಿಪ್ರಿಯಾಗೆ ಗಿಫ್ಟ್ ಕೊಡುವ ವೇಳೆ ವಸಿಷ್ಠ ತಾರಾ ಜತೆಗೆ ತರ್ಲೆ ಮಾಡಿದ್ದಾರೆ.
ಪ್ರೀತಿಯಲ್ಲಿದ್ದ ಈ ಸ್ಟಾರ್ ಜೋಡಿ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲೀಟ್ಟರು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೊಸ ವರ್ಷದ ದಿನ ಹರಿಪ್ರಿಯಾ ಅವರು ಬೇಬಿ ಬಂಪ್ ಫೋಟೋ ರೀಲ್ಸ್ ಅನ್ನು ಶೇರ್ ಮಾಡಿದ್ದರು.