Select Your Language

Notifications

webdunia
webdunia
webdunia
webdunia

ಸರಳತೆ, ಮಂತ್ರ ಮಾಂಗಲ್ಯ ಎಂಬುದೆಲ್ಲಾ ಭಾಷಣಕ್ಕೆ ಮಾತ್ರನಾ: ಟ್ರೋಲ್ ಆದ ಡಾಲಿ ಧನಂಜಯ್

Dally Dhananjay

Krishnaveni K

ಬೆಂಗಳೂರು , ಗುರುವಾರ, 13 ಫೆಬ್ರವರಿ 2025 (15:53 IST)
Photo Credit: X
ಬೆಂಗಳೂರು: ತಾವು ಮೆಚ್ಚಿದ ಹುಡುಗಿ ಡಾ. ಧನ್ಯತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ಡಾಲಿ ಧನಂಜಯ್ ಟ್ರೋಲ್ ಆಗುತ್ತಿದ್ದಾರೆ. ಸರಳತೆ, ಮಂತ್ರ ಮಾಂಗಲ್ಯ ಎನ್ನುವುದೆಲ್ಲಾ ಕೇವಲ ಭಾಷಣಕ್ಕೆ ಮಾತ್ರನಾ ಎಂದು ಕಾಲೆಳೆಯುತ್ತಿದ್ದಾರೆ.

ನಟ ಧನಂಜಯ್ ಈ ಹಿಂದಿನಿಂದಲೂ ಕೆಲವೊಂದು ಹೇಳಿಕೆಗಳಿಂದ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಡವರು ಮಕ್ಕಳು ಬೆಳಿಬೇಕು ಕಣಯ್ಯಾ ಎಂದವರು. ಫ್ರೀ ಅಕ್ಕಿ ಕೊಟ್ಟರೆ ತಪ್ಪೇನು ಎಂದಿದ್ದರು.

ಇದೀಗ ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿರುವುದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದಾರೆ. ಸರಳತೆ ಎನ್ನುವುದೆಲ್ಲಾ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾ ಎಂದಿದ್ದಾರೆ.

ಮತ್ತೆ ಕೆಲವರು ತೋರಿಕೆಗೆ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಿ ಮತ್ತೆ ನಿಮ್ಮ ಸಿನಿ ಸ್ನೇಹಿತರಿಗೆ ಒಂದು ರಿಸೆಪ್ಷನ್ ಕೊಟ್ಟಿದ್ರೂ ಸಾಕಿತ್ತು ಎಂದು ಕಾಲೆಳೆದಿದ್ದಾರೆ. ಫೆಬ್ರವರಿ 15 ಮತ್ತು16 ರಂದು ಮೈಸೂರಿನಲ್ಲಿ ಡಾಲಿ ಧನಂಜಯ್ ಮದುವೆಯಾಗಲಿದ್ದಾರೆ. ಇಂದಿನಿಂದಲೇ ವಿವಾಹ ಪೂರ್ಯ ಕಾರ್ಯಕ್ರಮಗಳು ಆರಂಭವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಡಿಶಾದ ರಾಪರ್ ಅಭಿನವ್ ಸಿಂಗ್ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವು