ತೆಲುಗಿನ ಹಿರಿಯ ನಟ ಚಿರಂಜೀವಿ ಅವರು ರಾಮ್‌ಚರಣ್‌ಗೆ ಮತ್ತೇ ಹೆಣ್ಣು ಮಗು ಹುಟ್ಟಬಹುದೆಂಬ ಭಯ ಎನ್ನುವ ಮಾತುಗಳನ್ನಾಡುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.
ಬ್ರಹ್ಮ ಆನಂದಂ ಚಿತ್ರದ ಪೂರ್ವ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ವಿವಾದಕ್ಕೆ ಸಿಲುಕಿದ್ದಾರೆ.
ಚಿರಂಜೀವಿ ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾ, ತಮ್ಮ ಮೊಮ್ಮಗಳ ಉಪಸ್ಥಿತಿಯಿಂದಾಗಿ ನಮ್ಮ ಮನೆ "ಲೇಡೀಸ್ ಹಾಸ್ಟೆಲ್" ನಲ್ಲಿ ವಾಸಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ನಾನು ಮಗ ರಾಮ್‌ಚರಣ್‌ಗೆ ಗಂಡು ಮಗು ಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಿರುತ್ತೇನೆ, ಇದರಿಂದ ನಮ್ಮ ಕುಟುಂಬದ ಪರಂಪರೆ ಮುಂದುವರೆಯುತ್ತದೆ. ಆದರೆ ಅವನ ಮಗಳು ಅವನ ಕಣ್ಣಿಗೆ ಬೇಡ ಎಂದು ಹೇಳಬಹುದು ಎಂದರು.
ಹಿರಿಯ ನಟನ ಈ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿವೆ. 2025ರ ಸಮಯದಲ್ಲೂ ಇಂತಹ ಹಿರಿಯ ನಟನ ಈ ರೀತಿಯ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದಿದ್ದಾರೆ.