ಬೆಂಗಳೂರು: ರಮ್ಯಾಗೆ ನಿಜವಾಗಿಯೂ ಎಂಗೇಜ್ ಮೆಂಟ್ ಆಗಿದೆಯಾ, ಈ ಬಗ್ಗೆ ಈಗ ನಟಿಯೇ ಮಾಧ್ಯಮಗಳ ಮುಂದೆ ಸ್ಪಷ್ಟನೆ ಕೊಟ್ಟಿದ್ದಾರೆ.
ರಮ್ಯಾ ಮೊನ್ನೆ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರೂ ಅಕ್ಕಪಕ್ಕ ಕೂತು ಮಾತನಾಡುತ್ತಿದ್ದರು. ಈ ವೇಳೆ ರಮ್ಯಾ ಕೈಯಲ್ಲಿದ್ದ ಉಂಗುರ ನೋಡಿ ರಕ್ಷಿತಾ ಅಚ್ಚರಿ ವ್ಯಕ್ತಪಡಿಸಿದ್ದರು. ಇಬ್ಬರೂ ರಿಂಗ್ ಬಗ್ಗೆ ಮಾತನಾಡುತ್ತಿದ್ದರು.
ಇದನ್ನು ನೋಡಿ ರಮ್ಯಾ ಸೀಕ್ರೆಟ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರಾ, ಅವರ ಎಂಗೇಜ್ ಮೆಂಟ್ ರಿಂಗ್ ತೋರಿಸುತ್ತಿದ್ದಾರಾ ಎಂಬ ಅನುಮಾನ ಎಲ್ಲರಲ್ಲಿ ಮೂಡಿತ್ತು. ಇದೀಗ ರಮ್ಯಾ ಎಲ್ಲರ ಅನುಮಾನಗಳಿಗೆ ಉತ್ತರ ನೀಡಿದ್ದಾರೆ.
ರಕ್ಷಿತಾ ಮತ್ತು ನನ್ನ ಮಾತುಕತೆಯನ್ನು ಬಹಿರಂಗ ಮಾಡುವುದು ನನಗೆ ಇಷ್ಟವಿಲ್ಲ. ನಾವಿಬ್ಬರೂ ಏನು ಮಾತನಾಡಿದ್ದೇವೆ ಎಂಬುದನ್ನು ಸಾರ್ವಜನಿಕವಾಗಿ ಯಾಕೆ ಹೇಳಬೇಕು? ಆಗ ಅದು ವೈಯಕ್ತಿಕ ಮಾತುಕತೆಯಾಗುವುದಿಲ್ಲ ಎಂದಿದ್ದಾರೆ. ಆ ಮೂಲಕ ಎಂಗೇಜ್ ಮೆಂಟ್ ರೂಮರ್ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ.