Select Your Language

Notifications

webdunia
webdunia
webdunia
webdunia

ಮದುವೆ ಬಗ್ಗೆ ಕೊನೆಗೂ ಅಧಿಕೃತ ಸುದ್ದಿ ಕೊಟ್ಟ ನಟಿ ರಮ್ಯಾ

Ramya
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೊನೆಗೂ ತಮ್ಮ ಮದುವೆ, ಬಾಯ್ ಫ್ರೆಂಡ್ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.

ನಟಿ ರಮ್ಯಾ ಕೆಲವು ದಿನಗಳ ಹಿಂದೆ ವಿದೇಶದಲ್ಲಿ ತಮ್ಮ ಗೆಳೆಯನ ಜೊತೆ ಓಡಾಡಿಕೊಂಡಿರುವ ಫೋಟೋ ವೈರಲ್ ಆಗಿತ್ತು. ರಮ್ಯಾ ಸಂಜೀವ್ ಮೋಹನ್ ಎನ್ನುವ ಉದ್ಯಮಿ ಜೊತೆ ಓಡಾಡುತ್ತಿದ್ದಾರೆ. ಇಬ್ಬರೂ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು.


ಇದೀಗ ರಮ್ಯಾ ಈ ವರ್ಷವೇ ಸಂಜೀವ್ ಜೊತೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಸಂಜೀವ್ ಪ್ರೀತಿಯಿಂದ ರಮ್ಯಾರನ್ನು ದಿವ್ಸ್ ಎಂದು ಕರೆಯುತ್ತಾರೆ, ಈ ವರ್ಷವೇ ನಮ್ಮ ಕ್ರಶ್ ಮದುವೆಯಾಗಲಿದ್ದಾರೆ ಎಂದು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿಯಬಿಟ್ಟಿದ್ದರು.

ಈ ಬಗ್ಗೆ ಸ್ವತಃ ರಮ್ಯಾ ಇನ್ ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ನ್ನು ಶೇರ್ ಮಾಡಿರುವ ಅವರು ಇದು ಫೇಕ್ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಸಂಜೀವ್ ಜೊತೆ ಈ ವರ್ಷವೇ ಮದುವೆ ಎಂಬಿತ್ಯಾದಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸ್ಪರ್ಧಿ ಗೌತಮಿ ಮಾವ ಯಾರು ಗೊತ್ತಾ, ಹಿನ್ನೆಲೆ ತಿಳಿದ್ರೆ ಶಾಕ್ ಆಗ್ತೀರಿ