Select Your Language

Notifications

webdunia
webdunia
webdunia
webdunia

ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರಬಂದರಾ ಸಂಜನಾ ಬುರ್ಲಿ

Sanjana Burli

Krishnaveni K

ಬೆಂಗಳೂರು , ಸೋಮವಾರ, 21 ಅಕ್ಟೋಬರ್ 2024 (08:46 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಸ್ನೇಹ ಪಾತ್ರಧಾರಿ ಸಂಜನಾ ಬುರ್ಲಿ ಹೊರಬಂದರಾ ಎಂಬ ಅನುಮಾನ ಬಂದಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ.

ಸಂಜನಾ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಕೆಲವೊಂದು ಗುಡ್ ಬೈ ಹೇಳಲು ಕಷ್ಟ ಎಂದು ಬರೆದುಕೊಂಡಿದ್ದರು. ಹೀಗಾಗಿ ಈ ಧಾರವಾಹಿಯಿಂದ ಅವರು ಹೊರಹೋಗುತ್ತಿದ್ದಾರೆ ಎಂಬ ಚರ್ಚೆ ದಟ್ಟವಾಗಿದೆ. ಆದರೆ ಈ ಬಗ್ಗೆ ಅವರು ನೇರವಾಗಿ ಏನನ್ನೂ ಹೇಳಿಲ್ಲ.

ಇನ್ನೊಂದೆಡೆ ಜೀ ಕುಟುಂಬ ಅವಾರ್ಡ್ಸ್ ನಾಮಿನೇಷನ್ ಪಾರ್ಟಿಯಲ್ಲೂ ಅವರು ಕಾಣಿಸಿಕೊಂಡಿಲ್ಲ. ಅಲ್ಲದೆ ನಾಯಕಿ ನಟಿ ಪ್ರಶಸ್ತಿಗೆ ಉಳಿದೆಲ್ಲಾ ನಾಯಕಿಯರ ಹೆಸರು ನಾಮಿನೇಟ್ ಆಗಿದ್ದರೂ ಸ್ನೇಹ ಹೆಸರು ಬಂದಿರಲಿಲ್ಲ. ಹೀಗಾಗಿ ಅವರು ಧಾರವಾಹಿಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.

ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಇದೀಗ ಸ್ನೇಹ ಜಿಲ್ಲಾಧಿಕಾರಿಯಾಗಿ ಪಾತ್ರ ಮಾಡುತ್ತಿದ್ದಾರೆ. ಮುಂದೆ ಅವರ ಪಾತ್ರದಲ್ಲಿ ಮಗುವಾಗ ಸೀಕ್ವೆನ್ಸ್ ಇರಬಹುದು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಮೆಚ್ಯೂರ್ಡ್ ಪಾತ್ರ ಬೇಡ ಎಂದ ಕಾರಣಕ್ಕೆ ಅವರು ಧಾರವಾಹಿಯಿಂದ ಹೊರಬಂದರಾ ಅಥವಾ ಧಾರವಾಹಿಯಲ್ಲಿ ಅವರ ಪಾತ್ರವೇ ಕೊನೆಯಾಗಲಿದೆಯಾ ಎಂಬ ಅನುಮಾನ ವೀಕ್ಷಕರನ್ನು ಕಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಿಚ್ಚ ಸುದೀಪ್ ತಾಯಿಗೆ ಅಂತಿಮ ನಮನ ಸಲ್ಲಿಸಿದ ಸ್ಯಾಂಡಲ್‌ವುಡ್ ತಾರೆಯರು