Select Your Language

Notifications

webdunia
webdunia
webdunia
webdunia

ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡದೇ ಇಲ್ಲ ಅಂದ ಫ್ಯಾನ್ಸ್: ಸಿಟ್ಟಿಗೆ ಕಾರಣವೇನು

Kanti-Sneha

Krishnaveni K

ಬೆಂಗಳೂರು , ಬುಧವಾರ, 23 ಅಕ್ಟೋಬರ್ 2024 (11:47 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಇಂದಿನ ಎಪಿಸೋಡ್ ನ ಪ್ರೋಮೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಇನ್ನು ಮುಂದೆ ಸೀರಿಯಲ್ ನನ್ನೇ ನೋಡಲ್ಲ ಅಂದಿದ್ದಾರೆ.
 
ಹಿರಿಯ ನಟಿ ಉಮಾಶ್ರೀ, ರಮೇಶ್ ಪಂಡಿತ್ ಮೊದಲಾದವರು ನಟಿಸಿರುವ ಧಾರವಾಹಿಯಲ್ಲಿ ನಾಯಕ ಕಂಠಿ ನಾಯಕಿ ಸ್ನೇಹ ಪಾತ್ರವೇ ಎಲ್ಲರ ಮೆಚ್ಚಿನ ಪಾತ್ರವಾಗಿತ್ತು. ಸ್ನೇಹ-ಕಂಠಿ ಜೋಡಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಆದರೆ ಇನ್ನು ಮುಂದೆ ಸೀರಿಯಲ್ ನಲ್ಲಿ ಈ ಜೋಡಿ ಜೊತೆಯಾಗಿರಲಿಲ್ಲ.

ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಪಾತ್ರವೇ ಕೊನೆಯಾಗುತ್ತಿದೆ. ಡಿಸಿಯಾಗಿರುವ ಸ್ನೇಹ ತನ್ನ ಅತ್ತೆ ಬಂಗಾರಮ್ಮನನ್ನು ಕಾಪಾಡಿ ಮನೆಗೆ ಕರೆತರುವಾಗ ಆಕ್ಸಿಡೆಂಟ್ ಆಗುತ್ತದೆ. ಇದರಲ್ಲಿ ನಾಯಕಿ ಸ್ನೇಹ ಸಾವನ್ನಪ್ಪುತ್ತಾಳೆ. ಈ ಪ್ರೋಮೋವನ್ನು ಈಗಾಗಲೇ ಹರಿಯಬಿಡಲಾಗಿದೆ.

ಇತ್ತೀಚೆಗೆ ಸ್ನೇಹ ಪಾತ್ರ ಮಾಡುತ್ತಿರುವ ನಟಿ ಸಂಜನಾ ಕೆಲವೊಂದು ಗುಡ್ ಬೈ ಹೇಳುವುದು ಕಷ್ಟ ಎಂದಿದ್ದರು. ಆಗಲೇ ವೀಕ್ಷಕರಿಗೆ ಅವರು ಧಾರವಾಹಿ ಬಿಡುತ್ತಿರುವ ಸುಳಿವು ಸಿಕ್ಕಿತ್ತು. ಇದೀಗ ಪಕ್ಕಾ ಆಗಿದೆ. ಧಾರವಾಹಿಯಲ್ಲಿ ಸ್ನೇಹ ಎಂಬ ಮತ್ತೊಬ್ಬ ಹೊಸ ಹುಡುಗಿಯ ಆಗಮನವಾಗಲಿದೆ. ಆಕೆಗೆ ಹೃದಯ ತೊಂದರೆಯಿದ್ದು, ಈಗ ಸ್ನೇಹ ಹೃದಯವನ್ನೇ ಆಕೆಗೆ ಇಟ್ಟು ಪಾತ್ರಕ್ಕೆ ಬೇರೊಂದು ಆಯಾಮ ಕೊಡಲು ನಿರ್ದೇಶಕರು ಹೊರಟಿದ್ದಾರೆ. ಆದರೆ ಇದು ವೀಕ್ಷಕರಿಗೆ ಇಷ್ಟವಾಗಿಲ್ಲ. ಸ್ನೇಹ ನಮ್ಮ ಮೆಚ್ಚಿನ ಪಾತ್ರ. ಸ್ನೇಹ-ಕಂಠಿ ಜೋಡಿ ಇಲ್ಲದ ಮೇಲೆ ನಾವು ಈ ಧಾರವಾಹಿಯನ್ನೇ ನೋಡಲ್ಲ. ನಮ್ಮ ಪಾಲಿಗೆ ಇಂದೇ ಈ ಧಾರವಾಹಿ ಕೊನೆಯ ಸಂಚಿಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಆಪರೇಷನ್ ಮಾಡಿಸಬೇಕು, ಜಾಮೀನು ಕೊಡಿ ಎಂದರೆ ನ್ಯಾಯಾಧೀಶರು ಹೇಳಿದ್ದೇನು