Publish Date: Fri, 15 Nov 2024 (10:22 IST)
Updated Date: Fri, 15 Nov 2024 (10:28 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿಯ ಹೈಡ್ರಾಮಾ ನೋಡಿ ಬೇಸತ್ತ ಪ್ರೇಕ್ಷಕರು ಈಗ ಬಾಲ ನಟಿ ಸಿಹಿಗೆ ಕಿವಿಮಾತು ಹೇಳಿದ್ದಾರೆ.
ಧಾರವಾಹಿಯಲ್ಲಿ ಈಗ ಬಾಡಿಗೆ ತಾಯಿ ಸೀತಾ ಮತ್ತು ಬಯೋಲಾಜಿಕಲ್ ತಂದೆ-ತಾಯಿ ಶ್ಯಾಮ್-ಶಾಲಿನಿ ನಡುವೆ ಸಿಹಿಯ ಕಸ್ಟಡಿಗಾಗಿ ಕಿತ್ತಾಟ ನಡೆಯುತ್ತಿದೆ. ಶಾಲಿನಿ ಕುತಂತ್ರದಿಂದ ಸೀತಾ ಜೈಲು ಕಂಬಿ ಎಣಿಸುವಂತಾಗಿದೆ. ಇಬ್ಬರೂ ಸಿಹಿ ನನಗೆ ಬೇಕು ಎಂದು ಕಿತ್ತಾಡುತ್ತಿದ್ದಾರೆ.
ಸಿಹಿ ಮಾತ್ರ ನನಗೆ ಸೀತಮ್ಮನೇ ಅಮ್ಮ ಎಂದು ಅಳುತ್ತಿದ್ದಾಳೆ. ಮಗುವಿನ ಅವಸ್ಥೆ ನೋಡಿ ವೀಕ್ಷಕರು ಸಿಹಿ ಪಾತ್ರಧಾರಿಗೆ ವಿಶಿಷ್ಟ ಸಲಹೆ ನೀಡಿದ್ದಾರೆ. ಸಿಹಿಯನ್ನು ಇಬ್ಬರೂ ದಂಪತಿಗಳು ನನ್ನ ಮಗು, ನನ್ನ ಮಗು ಎಂದು ರುಬ್ಬುತ್ತಿರುವುದು ನೋಡಿ ನೀನು ಡಬಲ್ ಪೇಮೆಂಟ್ ಕೇಳಮ್ಮಾ ಎಂದು ವೀಕ್ಷಕರು ಸಲಹೆ ನೀಡಿದ್ದಾರೆ.
ಇನ್ನು, ಶ್ಯಾಮ್-ಶಾಲಿನಿ, ಬಾಡಿಗೆ ತಾಯ್ತನದ ವಿಚಾರ ಬಂದಾಗಿನಿಂದ ಸೀತಾರಾಮ ಧಾರವಾಹಿ ಹಳಿ ತಪ್ಪಿದೆ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯವೂ ಮಗುವಿನ ವಿಚಾರಕ್ಕೆ ಹೈ ಡ್ರಾಮಾ ನೋಡಿ ಬೇಸತ್ತಿದ್ದೇವೆ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.