Select Your Language

Notifications

webdunia
webdunia
webdunia
webdunia

ಸೀತಾರಾಮ ಧಾರವಾಹಿ ಬಿಟ್ಟೇ ಬಿಟ್ರಾ ಅಶೋಕ್: ಅಭಿಮಾನಿಗಳಿಗೆ ಹೇಳಿದ್ದೇನು

Ashok
Photo Credit: Instagram
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಸೀತಾರಾಮದಲ್ಲಿ ನಾಯಕ-ನಾಯಕಿಯಷ್ಟೇ ಜನಪ್ರಿಯವಾಗಿರುವ ಇನ್ನೊಂದು ಪಾತ್ರವೆಂದರೆ ಅಶೋಕ್. ಕೆಲವು ದಿನಗಳಿಂದ ಅವರು ಧಾರವಾಹಿಯಲ್ಲಿ ನಾಪತ್ತೆಯಾಗಿದ್ದಾರೆ. ಇದಕ್ಕೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸೀತಾರಾಮ ಧಾರವಾಹಿಯಲ್ಲಿ ನಟ ಅಶೋಕ್ ನಾಯಕನ ಸ್ನೇಹಿತನ ಪಾತ್ರ ಮಾಡುತ್ತಿದ್ದಾರೆ. ಧಾರವಾಹಿಯಲ್ಲೂ ಅಶೋಕ್ ಎಂದೇ ಅವರ ಪಾತ್ರದ ಹೆಸರು. ಇತ್ತೀಚೆಗಷ್ಟೇ ಸೀತಾರಾಮ ಧಾರವಾಹಿಯಲ್ಲಿ ನಾಯಕ ರಾಮ್ ಮತ್ತು ನಾಯಕಿ ಸೀತಾ ಮದುವೆ ಎಪಿಸೋಡ್ ಗಳು ಪ್ರಸಾರವಾಗಿದ್ದವು. ಈ ಎಪಿಸೋಡ್ ಗಳ ಬಳಿಕ ಅಶೋಕ್ ಕಳೆದ ಒಂದು ವಾರದಿಂದ ಧಾರವಾಹಿಯಲ್ಲಿ ಕಾಣಿಸಿಕೊಂಡೇ ಇಲ್ಲ.

ಮದುವೆ ಮುಗಿಸಿ ರಾಮ್-ಸೀತಾ ಮನೆಗೆ ಬಂದಾಗ ಅಶೋಕ್ ವಿದೇಶಕ್ಕೆ ಹೋಗಿದ್ದಾನೆ ಎಂದು ತೋರಿಸಲಾಗಿತ್ತು. ಇದಾದ ಬಳಿಕ ಕೆಲವು ಎಪಿಸೋಡ್ ಗಳಿಂದ ಅಶೋಕ್ ಇರಲಿಲ್ಲ. ಇದನ್ನು ನೋಡಿ ಅಶೋಕ್ ಸೀರಿಯಲ್ ಬಿಟ್ಟೇ ಬಿಟ್ರಾ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಅಶೋಕ್ ಇಲ್ಲದೇ ಸೀರಿಯಲ್ ನೋಡಲು ಬೋರ್. ರಾಮ್ ಪಾತ್ರಕ್ಕೆ ಒಂದು ತೂಕ ಬರಬೇಕೆಂದರೆ ಅಶೋಕ್ ಇರಲೇಬೇಕು. ದಯವಿಟ್ಟು ಅಶೋಕ್ ರನ್ನು ರಿಪ್ಲೇಸ್ ಮಾಡಬೇಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ವೀಕ್ಷಕರ ಬೇಡಿಕೆಗೆ ಕೊನೆಗೂ ಅಶೋಕ್ ಸ್ಪಂದಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿರುವ ಅಶೋಕ್, ನಾನು ಸೀರಿಯಲ್ ಬಿಟ್ಟಿಲ್ಲ. ನನ್ನನ್ನು ಮುಂದಿನ ಎಪಿಸೋಡ್ ಗಳಲ್ಲಿ ನೋಡಬಹುದು ಎಂದಿದ್ದಾರೆ. ಅಶೋಕ್ ಕೊಟ್ಟ ಉತ್ತರ ಅಭಿಮಾನಿಗಳಿಗೂ ಸಮಾಧಾನ ತಂದಿರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಲುಕ್‌ನಲ್ಲಿ ಹೃದಯಗಳನ್ನು ಕದಿಯುತ್ತಿರುವ ಯಶ್ ಮುಂದಿನ ‍ಪ್ಲಾನ್ ಏನು