Select Your Language

Notifications

webdunia
webdunia
webdunia
webdunia

ಹೊಸ ಲುಕ್‌ನಲ್ಲಿ ಹೃದಯಗಳನ್ನು ಕದಿಯುತ್ತಿರುವ ಯಶ್ ಮುಂದಿನ ‍ಪ್ಲಾನ್ ಏನು

ಹೊಸ ಲುಕ್‌ನಲ್ಲಿ ಹೃದಯಗಳನ್ನು ಕದಿಯುತ್ತಿರುವ ಯಶ್ ಮುಂದಿನ ‍ಪ್ಲಾನ್ ಏನು

Sampriya

ಮುಂಬೈ , ಮಂಗಳವಾರ, 23 ಜುಲೈ 2024 (19:32 IST)
Photo Courtesy X
ಮುಂಬೈ: ಬ್ಲಾಕ್‌ಬಸ್ಟರ್ 'ಕೆಜಿಎಫ್' ಸಿನಿಮಾ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಯಶ್ ಅವರು ಇದೀಗ ಹೊಸ ಲುಕ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಯಶ್ ನಟನೆ ಜತೆಗೆ ಅವರ ಸ್ಟೈಲಿಶ್ ಲುಕ್‌ಗೆ ಅಪಾರ ಅಭಿಮಾನಿಗಳಿದ್ದಾರೆ.

ಇತ್ತೀಚಿನವರೆಗೂ ಯಶ್ ಅವರನ್ನು ಉದ್ದನೆಯ ಗಡ್ಡ ಮತ್ತು ಉದ್ದನೆಯ ಕೂದಲಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಸಡನ್ ಆಗಿ ಡೀಸೆಂಟ್‌ ಲುಕ್‌ನಲ್ಲಿ ಕ್ಯಾಮಾರ ಕಣ್ಣಿಗೆ ಸೆರೆಯಾಗಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.

 ಆದರೆ ಅವರ ಈ ಲುಕ್ ಅವರ ಮುಂದಿನ ಸಿನಿಮಾ ಟಾಕ್ಸಿಕ್‌ಗಾಗಿ ಎಂದು ತಿಳಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಯಶ್‌ಗೆ ಅವರ ಗಡ್ಡ, ಕೂದಲಿಗೆ ಅವರ ಹೇರ್‌ ಸ್ಟೈಲಿಸ್ಟ್‌ ಅಲೆಕ್ಸ್ ವಿಜಯಕಾಂತ್ ಕತ್ತರಿಹಾಕುವುದನ್ನು ನೋಡಬಹುದು.

ಯಶ್ ಅವರೊಂದಿಗಿನ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅಲೆಕ್ಸ್, ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, "ನಿಜವಾಗಿಯೂ ಸ್ಫೋಟಕವಾದ ನೋಟವನ್ನು ರಚಿಸುವುದು. ರಾಕಿಂಗ್ ಸ್ಟಾರ್ ಯಶ್‌ಗೆ ಕಸ್ಟಮ್ ಪಾಂಪಡೋರ್! ಸಾಂಪ್ರದಾಯಿಕ ಉದ್ದನೆಯ ಕೂದಲಿನ ನೋಟದಿಂದ ಟಾಕ್ಸಿಕ್‌ಗಾಗಿ ಚಿಕ್ಕದಾದ, ಹರಿತವಾದ ಮತ್ತು ತೀವ್ರವಾದ ಶೈಲಿಯನ್ನು ರಚಿಸುವುದು. @thenameisYash ನಿರ್ವಹಿಸಿದ ಪಾತ್ರಗಳಿಗೆ ಸಂಪೂರ್ಣವಾಗಿ ಪೂರಕವಾಗಿರುವ ಕೇಶವಿನ್ಯಾಸವು ನಾನು ಆನಂದಿಸುವ ಸವಾಲಾಗಿದೆ ಮತ್ತು ಈ ಪಾಂಪಡೋರ್ ಅದಕ್ಕೆ ಸಾಕ್ಷಿಯಾಗಿದೆ."

ಫೋಟೋ ನೋಡಿದ ಕೂಡಲೇ ಅಭಿಮಾನಿಗಳು ಯಶ್‌ ಲುಕ್‌ಗೆ ಫಿದಾ ಆಗಿದ್ದಾರೆ.  "ವಾವ್... ಯಶ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
"ಯಶ್ ಬಾಸ್ ಹೃದಯಗಳನ್ನು ಕದಿಯುತ್ತಿದ್ದಾರೆ! ಈ ನೋಟದಿಂದ," ಇನ್ನೊಬ್ಬರು ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ದರ್ಶನ್‌ಗೆ ಮತ್ತೇ ಮತ್ತೇ ಕಾಡುತ್ತಿದೆಯಾ ಜ್ವರ