Select Your Language

Notifications

webdunia
webdunia
webdunia
webdunia

ನಿಜ ಜೀವನದಲ್ಲೂ ವೈಷ್ಣವಿ, ಗಗನ್ ಪ್ರೇಮಿಗಳಾ: ಸೀತಾರಾಮನ ಮೇಲೆ ನೆಟ್ಟಿಗರಿಗೆ ಅನುಮಾನ

Seetha Rama serial

Krishnaveni K

ಬೆಂಗಳೂರು , ಮಂಗಳವಾರ, 3 ಸೆಪ್ಟಂಬರ್ 2024 (16:23 IST)
Photo Credit: Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಸೀತಾರಾಮ ನಾಯಕ ಗಗನ್ ಚಿನ್ನಪ್ಪ ಮತ್ತು ನಾಯಕಿ ವೈಷ್ಣವಿ ನಿಜ ಜೀವನದಲ್ಲೂ ಪ್ರೇಮಿಗಳಾ? ಹೀಗೊಂದು ಅನುಮಾನ ನೆಟ್ಟಿಗರಿಗೆ ಮೂಡಿದೆ. ಇದಕ್ಕೆ ಕಾರಣವೂ ಇದೆ.

ವೈಷ್ಣವಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಇತ್ತೀಚೆಗೆ ಒಂದು ವಿಡಿಯೋ ಪ್ರಕಟಿಸಿದ್ದರು. ಈ ವಿಡಿಯೋದಲ್ಲಿ ಗಗನ್ ಮತ್ತು ವೈಷ್ಣವಿ ಪ್ರೇಮಿಗಳಂತೆ ಪರಸ್ಪರ ಹರಟುತ್ತಾ ಪಾರ್ಕ್ ವೊಂದರಲ್ಲಿ ಸುಂದರ ಕ್ಷಣ ಕಳೆಯುತ್ತಿದ್ದಾರೆ. ಇಬ್ಬರೂ ಜೊತೆಯಾಗಿರುವ ಈ ವಿಡಿಯೋ ನೋಡಿ ನೆಟ್ಟಿಗರಿಗೆ ಅನುಮಾನ ಮೂಡಿದೆ.

ಈ ವಿಡಿಯೋ ಸೀತಾರಾಮ ಅಭಿಮಾನಿಗಳಿಗಾಗಿ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ. ಆದರೆ ಇಬ್ಬರನ್ನೂ ನೋಡಿ ನೆಟ್ಟಿಗರು ನೀವು ನಿಜ ಜೀವನದಲ್ಲೂ ಪ್ರೇಮಿಗಳಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ನೀವು ನಿಜ ಜೀವನದಲ್ಲೂ ಮದುವೆಯಾಗಿ. ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆಲ್ಲಾ ವೈಷ್ಣವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಮೊದಲು ವೈಷ್ಣವಿ ಅಗ್ನಿಸಾಕ್ಷಿ ಧಾರವಾಹಿ ಮಾಡುತ್ತಿದ್ದಾಗಲೂ ನಾಯಕ ವಿಜಯ್ ಸೂರ್ಯ ಜೊತೆ ಅವರ ಹೆಸರು ಥಳುಕು ಹಾಕಲಾಗುತ್ತಿತ್ತು. ಕೆಲವರಂತೂ ಅವರು ಮದುವೆಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು. ಇದಕ್ಕೆ ಎಷ್ಟೋ ಬಾರಿ ಇಬ್ಬರೂ ಸ್ಪಷ್ಟನೆ ಕೊಟ್ಟಿದ್ದೂ ಇದೆ. ಈಗ ತೆರೆ ಮೇಲಿನ ಹಿಟ್ ಜೋಡಿ ಎಂದರೆ ಸೀತಾ-ರಾಮ. ಹೀಗಾಗಿ ಇವರು ನಿಜ ಜೀವನದಲ್ಲೂ ಒಂದಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಹೀರೋ ಆದ ಜ್ಯೂ ಎನ್ ಟಿಆರ್: ಪ್ರವಾಹ ಪೀಡಿತರಿಗಾಗಿ ದೊಡ್ಡ ಮೊತ್ತ ದಾನ