ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಸೂಪರ್ ಹಿಟ್ ಆದ ಸೀತಾರಾಮ ಧಾರವಾಹಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ. ಇದರ ಪ್ರೋಮೋಗಳು ಈಗಾಗಲೇ ಹರಿದಾಡುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ ಧಾರವಾಹಿ ಸೀತಾರಾಮ. ಈ ಧಾರವಾಹಿಯಲ್ಲಿ ಗಗನ್ ಚಿನ್ನಪ್ಪ ಮತ್ತು ವೈಷ್ಣವಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಬೇಬಿ ರೀತು ಸಿಂಗ್ ಮುಗ್ಧ ಅಭಿನಯ ಎಲ್ಲರಿಗೂ ಇಷ್ಟವಾಗುತ್ತಿದೆ. ಈ ಧಾರವಾಹಿ ಈಗ ಟಾಪ್ 5 ರೊಳಗೇ ಟಿಆರ್ ಪಿ ಪಡೆದುಕೊಳ್ಳುತ್ತಿದೆ.
ಕನ್ನಡದ ಈ ಸೂಪರ್ ಹಿಟ್ ಧಾರವಾಹಿ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ. ಮೈ ಹೂ ಸಾಥ್ ತೇರೆ ಎನ್ನುವ ಶೀರ್ಷಿಕೆಯೊಂದಿಗೆ ಹಿಂದಿ ಜೀ ಟಿವಿಯಲ್ಲಿ ಪ್ರಸಾರವಾಗಲಿದೆ. ಇದರ ಪ್ರೋಮೋಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹಿಂದಿಯಲ್ಲಿ ಗಗನ್ ಚಿನ್ನಪ್ಪ ಪಾತ್ರವನ್ನು ಕರಣ್ ವೋಹ್ರಾ ಮತ್ತು ವೈಷ್ಣವಿ ಪಾತ್ರವನ್ನು ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ.
ಒಂದೇ ಒಂದು ಬದಲಾವಣೆಯೆಂದರೆ ಕನ್ನಡದಲ್ಲಿ ನಾಯಕಿಗೆ ಮಗಳಿರುವುದಾಗಿ ತೋರಿಸಲಾಗಿದೆ. ಆದರೆ ಹಿಂದಿಯಲ್ಲಿ ಮಗನೆಂದು ತೋರಿಸಲಾಗುತ್ತಿದೆ. ಅಂದ ಹಾಗೆ ಸೀತಾರಾಮ ಧಾರವಾಹಿ ಮರಾಠಿಯ ಮಜಿ ತುಜಿ ರೆಶಿಮಗತ್ ಧಾರವಾಹಿಯ ರಿಮೇಕ್ ಆಗಿತ್ತು.