ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳಾಗಿದ್ದ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಗೌಡ ಮದುವೆಯಾಗಿದ್ದಾರೆ ಎನ್ನಲಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇವರಿಬ್ಬರ ಮದುವೆ ಫೋಟೋಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಇದು ರಿಯಲ್ ಮದುವೆಯಲ್ಲ. ಜಾಹೀರಾತೊಂದರ ಚಿತ್ರೀಕರಣಕ್ಕಾಗಿ ನಡೆದ ಮದುವೆ ಎಂದು ಆಮೇಲೆ ಗೊತ್ತಾಗಿದೆ. ಇಬ್ಬರೂ ಹೂ ಮಾಲೆ ಧರಿಸಿ ಸತಿ-ಪತಿಯಂತೆ ಮಂಟಪದಲ್ಲಿ ಕುಳಿತಿರುವ ಫೋಟೋ ನೋಡಿ ನೆಟ್ಟಿಗರು ನಿಜಕ್ಕೂ ಶಾಕ್ ಆಗಿದ್ದರು.
ಬಿಗ್ ಬಾಸ್ ನಲ್ಲಿ ಇಬ್ಬರ ನಡುವೆ ಕೊನೆ ಕೊನೆಗೆ ಉತ್ತಮ ಬಾಂಧವ್ಯವಿತ್ತು. ಕೆಲವು ದಿನಗಳ ಮೊದಲು ರಿಯಾಲಿಟಿ ಶೋ ಒಂದರಲ್ಲಿ ಕಾರ್ತಿಕ್ ತಾಯಿ ಬಿಗ್ ಬಾಸ್ ಸಹ ಸ್ಪರ್ಧಿಯೇ ಕಾರ್ತಿಕ್ ಜೀವನ ಸಂಗಾತಿಯಾಗಲಿದ್ದಾರೆ ಎಂದಿದ್ದರು. ಇದೀಗ ಕಾರ್ತಿಕ್-ನಮ್ರತಾ ಮದುವೆ ಫೋಟೋ ನೋಡಿ ಇವರು ನಿಜವಾಗಿಯೂ ಮದುವೆಯಾದರೇನೋ ಎಂದು ಅಚ್ಚರಿಪಟ್ಟಿದ್ದಾರೆ.
ಆದರೆ ಬಳಿಕ ಇದು ಜಾಹೀರಾತು ಶೂಟಿಂಗ್ ಗಾಗಿ ನಡೆದ ಮದುವೆ ಎಂದು ಗೊತ್ತಾಗಿದೆ. ಒಂದು ವಿವಾಹ ಮಂಟಪದಲ್ಲಿರುವ ಫೋಟೋ ಇನ್ನೊಂದು ರಿಸೆಪ್ಷನ್ ಸೂಟ್ ನಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇವರಿಬ್ಬರ ಜೋಡಿ ನೋಡಿ ನಿಜ ಜೀವನದಲ್ಲೂ ಇಬ್ಬರೂ ಒಂದಾಗಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.