Select Your Language

Notifications

webdunia
webdunia
webdunia
webdunia

ಬಾಯ್ ಫ್ರೆಂಡ್ ಬಗ್ಗೆ ಸುಳಿವು ಕೊಟ್ಟ ಬಿಬಿಕೆ ಸ್ಪರ್ಧಿ ಸಂಗೀತಾ ಶೃಂಗೇರಿ

Sangeetha Sringeri

Krishnaveni K

ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2024 (12:11 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದ ನಟಿ ಸಂಗೀತಾ ಶೃಂಗೇರಿ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಇತ್ತೀಚೆಗೆ ಶೋ ಒಂದರಲ್ಲಿ ಸುಳಿವು ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಂಗೀತಾ ಭಾಗಿಯಾಗಿದ್ದರು. ಈ ವೇಳೆ ಸಂಗಾತಿಗೆ ಬಿಗ್ ಬಾಸ್ ನಲ್ಲಿರುವಂತೆ ಎಸ್ ಆರ್ ನೋ ಪ್ರಶ್ನೆ ಕೇಳಲಾಯಿತು. ನಿರೂಪಕ ನಿರಂಜನ್ ಕೇಳಿದ ಪ್ರಶ್ನೆಯೊಂದರಲ್ಲಿ ಅವರು ಮದುವೆಯಾಗುವ ಹುಡುಗನ ಬಗ್ಗೆ ಸುಳಿವು ಸಿಕ್ಕಿದೆ.

ನಿರಂಜನ್ ಹಲವು ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆ ಸಂಗೀತಾ ಎಸ್ ಅಥವಾ ನೋ ಹೇಳಬೇಕಿತ್ತು. ಈ ನಡುವೆ ಸಂಗೀತಾ ಮದುವೆಯಾಗುವ ಹುಡುಗ ಹೊಸಪೇಟೆಯಲ್ಲಿದ್ದಾರೆ ಎಂದು ನಿರಂಜನ್ ಕೇಳಿದರು. ಆಗ ಸಂಗೀತಾ ಕೊಂಚ ಗಲಿಬಿಲಿಯಾಗಿದ್ದು, ನಿರಂಜನ್ ಕಡೆಗೆ ಗುರಾಯಿಸಿದರು. ತಕ್ಷಣವೇ ನಿರಂಜನ್ ಹೋಗ್ಲಿ ಬಿಡಿ ಎಂದು ಮಾತು ಬದಲಾಯಿಸಿದರು.

ಆದರೆ ಇದನ್ನು ವೀಕ್ಷಕರು ಮಾತ್ರ ಬೇರೆಯೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಸಂಗೀತಾ ಮದುವೆಯಾಗುವ ಹುಡುಗನ ಬಗ್ಗೆ ಸುಳಿವು ಗೊತ್ತಿದ್ದೇ ನಿರಂಜನ್ ಈ ಪ್ರಶ್ನೆ ಕೇಳಿರಬೇಕು. ಅದಕ್ಕೇ ಅವರೂ ಏನೂ ಉತ್ತರಿಸಲಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಸಂಗೀತಾ ರೆಬಲ್ ಆಗಿಯೇ ಎಲ್ಲರ ಗಮನ ಸೆಳೆದಿದ್ದರು. ಮನೆಯಲ್ಲಿ ಅತೀ ಹೆಚ್ಚು ವಾದ-ವಿವಾದ, ಸಿಟ್ಟು ಮಾಡಿಕೊಳ್ಳುತ್ತಿದ್ದರು. ಹಾಗಿದ್ದರೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ಕೊನೆಗೆ ರನ್ನರ್ ಅಪ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಮನೆಯಿಂದ ಹೊರಬಂದರು. ಹಾಗಿದ್ದರೂ ಬಿಗ್ ಬಾಸ್ ಮನೆಗೆ ಹೋದ ಮೇಲೆ ಅವರ ಅಭಿಮಾನಿಗಳ ಸಂಖ್ಯೆಯೂ ಗಣನೀಯವಾಗಿ ಏರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕುಲ್ ಪ್ರೀತ್ ಸಿಂಗ್ ವಿವಾಹಕ್ಕೆ ಶುಭ ಕೋರಿದ್ದಕ್ಕೆ ಪ್ರಧಾನಿ ಮೋದಿಗೆ ಟೀಕೆ