Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸಹ ಸ್ಪರ್ಧಿಯೇ ವಿನ್ನರ್ ಕಾರ್ತಿಕ್ ಮಹೇಶ್ ಜೀವನ ಸಂಗಾತಿ!

Karthik Mahesh

Krishnaveni K

ಬೆಂಗಳೂರು , ಶನಿವಾರ, 10 ಫೆಬ್ರವರಿ 2024 (09:10 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಕಾರ್ತಿಕ್ ಮಹೇಶ್ ಈಗ ಮೋಸ್ಟ್ ವಾಂಟೆಡ್ ಬ್ಯಾಚುಲರ್. ಆದರೆ ಕಾರ್ತಿಕ್ ಮದುವೆ ಬಗ್ಗೆ ಅವರ ತಾಯಿ ನೀಡಿದ ಹೇಳಿಕೆಯೊಂದು ಈಗ ಸಂಚಲನ ಮೂಡಿಸಿದೆ.

ಕಾರ್ತಿಕ್ ಮಹೇಶ್ ಬಿಗ್ ಬಾಸ್ ಫೈನಲ್ ಗೆದ್ದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ತನಗೆ ಯಾರೂ ಗರ್ಲ್ ಫ್ರೆಂಡ್ ಇಲ್ಲ ಎಂದಿದ್ದರು. ಆದರೆ ಕಾರ್ತಿಕ್ ತಾಯಿ ಇದೀಗ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಅವರು ಬಿಗ್ ಬಾಸ್ ಸಹ ಸ್ಪರ್ಧಿಯನ್ನೇ ಜೀವನ ಸಂಗಾತಿ ಮಾಡಿಕೊಳ್ಳುತ್ತಾರೆ ಎಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕಾರ್ತಿಕ್ ತಾಯಿ ಹೇಳಿದ್ದೇನು?
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ರಲ್ಲಿ ಭಾಗಿಯಾಗಿರುವ ಕಾರ್ತಿಕ್ ಮತ್ತು ಅವರ ತಾಯಿಗೆ ನಿರೂಪಕಿ ಸುಷ್ಮಾ ರಾವ್ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯೇ ಕಾರ್ತಿಕ್ ಜೀವನ ಸಂಗಾತಿಯಾಗುತ್ತಾರಾ ಎಂದು ಯೆಸ್ ಆರ್ ನೋ ಪ್ರಶ್ನೆ ಮಾಡಿದರು. ಇದಕ್ಕೆ ಕಾರ್ತಿಕ್ ತಾಯಿ ಯೆಸ್ ಬೋರ್ಡ್ ಹಿಡಿದು ತೋರಿಸಿದರು. ಅಂದರೆ ಬಿಗ್ ಬಾಸ್ ಸ್ಪರ್ಧಿಯನ್ನೇ ಕಾರ್ತಿಕ್ ಮದುವೆಯಾಗಲಿದ್ದಾರೆ ಎಂದರು. ತಾಯಿ ಈ ಉತ್ತರ ಕೊಟ್ಟಾಗ ಕಾರ್ತಿಕ್ ಶಾಕ್ ಆಗಿ ತಾಯಿ ಕಡೆಗೆ ನೋಡುತ್ತಾರೆ. ಈ ಎಪಿಸೋಡ್ ಇಂದು ಪ್ರಸಾರವಾಗಲಿದೆ.

ಬಿಗ್ ಬಾಸ್ ಸೀಸನ್ 10 ರಲ್ಲಿ ಆರಂಭದಲ್ಲಿ ಕಾರ್ತಿಕ್ ನಟಿ ಸಂಗೀತಾ ಶೃಂಗೇರಿಗೆ ಆಪ್ತರಾಗಿದ್ದರು. ಆದರೆ ಬಳಿಕ ಅವರ ನಡುವೆ ವೈಮನಸ್ಯವೇರ್ಪಟ್ಟು ಬೇರೆಯಾಗಿದ್ದರು. ಈ ವೇಳೆ ನಮ್ರತಾ ಜೊತೆಗೆ ಹೆಚ್ಚು ಸಲುಗೆಯಿಂದಿದ್ದರು. ಹೀಗಾಗಿ ಕಾರ್ತಿಕ್ ಗೆ ಈ ಇಬ್ಬರಲ್ಲಿ ಯಾರು ಜೀವನ ಸಂಗಾತಿಯಾಗಬಹುದು ಎಂದು ವೀಕ್ಷಕರು ಅದಾಗಲೇ ಚರ್ಚೆ ಮಾಡಲು ಶುರು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟೇರ ಸಕ್ಸಸ್ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದರ್ಶನ್