Publish Date: Fri, 23 Feb 2024 (16:01 IST)
Updated Date: Fri, 23 Feb 2024 (16:33 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಪ್ರಬಲ ಸ್ಪರ್ಧಿಯಾಗಿದ್ದ ವಿನಯ್ ಗೌಡ ಅಭಿಮಾನಿಯೊಬ್ಬರ ವರ್ತನೆಯಿಂದ ತಲ್ಲಣಗೊಂಡಿದ್ದಾರೆ.
ಬಿಗ್ ಬಾಸ್ ನಲ್ಲಿ ವಿನಯ್ ನೋಡಿ ಅಪ್ಪಟ ಅಭಿಮಾನಿಯಾಗಿದ್ದ ಯುವಕನೊಬ್ಬ ರಕ್ತದಲ್ಲಿ ವಿನಯ್ ಚಿತ್ರ ಬಿಡಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಟ್ಯಾಗ್ ಮಾಡಿದ್ದಾನೆ. ಇದನ್ನು ಗಮನಿಸಿದ ವಿನಯ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
ಅಭಿಮಾನಿ ಸಿರಿಂಜ್ ಬಳಸಿ ರಕ್ತ ಹೊರತೆಗೆದು ಅದರಿಂದ ವಿನಯ್ ಚಿತ್ರ ಬಿಡಿಸಿದ್ದಾನೆ. ಆದರೆ ಅಭಿಮಾನಿಯ ವರ್ತನೆ ವಿನಯ್ ಗೆ ಗಾಬರಿ ತಂದಿದೆ. ನಿಮ್ಮ ಅಮೂಲ್ಯವಾದ ರಕ್ತವನ್ನು ಹೀಗೆ ವೇಸ್ಟ್ ಮಾಡಬೇಡಿ ಎಂದು ಅಭಿಮಾನಿಗೆ ಬುದ್ಧಿವಾದ ಹೇಳಿದ್ದಾರೆ. ದಯವಿಟ್ಟು, ರಕ್ತ ಅಮೂಲ್ಯವಾದುದು. ಅದನ್ನು ಹಾಳು ಮಾಡಬೇಡಿ. ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಧನ್ಯವಾದಗಳು. ರಕ್ತ ಬೇಕಾದವರಿಗೆ ದಾನ ಮಾಡಿ. ಆದರೆ ಈ ರೀತಿ ಹಾಳುಮಾಡಬೇಡಿ. ಯಾವ ಅಭಿಮಾನಿಯೂ ಈ ರೀತಿ ಮಾಡಬಾರದು ಎಂದು ವಿನಯ್ ವಿಶೇಷ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ನಲ್ಲಿ ತಮ್ಮದೇ ಶೈಲಿಯ ಆಟದಿಂದಾಗಿ ವಿನಯ್ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿಮಾನಿಗಳ ಅಭಿಮಾನವೆಂದರೆ ಹಾಗೆ. ಕೆಲವೊಮ್ಮೆ ಅದು ಸೆಲೆಬ್ರಿಟಿಗಳಿಗೆ ಕಿರಿ ಕಿರಿಯಾಗುವುದೂ ಇದೆ. ಇದೀಗ ವಿನಯ್ ಗೂ ಅಭಿಮಾನಿಯ ವರ್ತನೆ ತಲ್ಲಣವುಂಟು ಮಾಡಿದೆ.