Select Your Language

Notifications

webdunia
webdunia
webdunia
Wednesday, 9 April 2025
webdunia

ನೋಟಿಸ್ ಪಡೆದ ನಟಿ ವೈಷ್ಣವಿ ಗೌಡ ಮಾಡಿದ ತಪ್ಪೇನು ಗೊತ್ತಾ

Vaishnavi Gowda

Sampriya

ಬೆಂಗಳೂರು , ಸೋಮವಾರ, 13 ಮೇ 2024 (15:38 IST)
photo Courtesy Instagram
ನಟಿ ವೈಷ್ಣವಿ ಗೌಡ ಅವರು ಸೀತಾ ರಾಮ ಸೀರಿಯಲ್ ಪಾತ್ರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಸೀರಿಯಲ್ ಪಾತ್ರದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಇದೀಗ ವೈಷ್ಣವಿ ಅವರು ರಿಯಲ್ ಜೀವನದಲ್ಲಿ ಸಂಕಷ್ಟ ಎದುರಿಸಿದ್ದಾರೆ.

ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಿರ್ವಹಿಸುವಾಗ ಸ್ನೇಹಿತೆ ಜತೆ ಪ್ರಯಾಣಿಸುತ್ತಿರುವಾಗ ಹೆಲ್ಮೇಟ್ ಹಾಕದಿದ್ದಕ್ಕೆ ಅವರ ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಠಾಣೆ ಮೆಟ್ಟಿಲೇರಿದ್ದಾರೆ.  

ಜಯಪ್ರಕಾಶ್ ಎಕ್ಕೂರು ಎಂಬವವರು  ಈ ಸಂಬಂಧ ಧಾರವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ಝೀ ವಾಹಿನಿ ಮೇಲೆ ಕ್ರಮ ಜರುಗಿಸಬೇಕು ಎಂದು  ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ ಮಂಗಳೂರು ಪೊಲೀಸರು ಬಳಿಕ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಪ್ರಕರಣವನ್ನು  ವರ್ಗಾವಣೆ ಮಾಡಿದ್ದರು. ಬಳಿಕ ಜೀ ವಾಹಿನಿ ಮತ್ತು ನಟಿ ವೈಷ್ಣವಿ ಗೌಡ ಅವರಿಗೆ ಪೊಲೀಸ್‌ ನೋಟಿಸ್ ಜಾರಿ ಮಾಡಲಾಗಿತ್ತು.

ಧಾರವಾಹಿ ಚಿತ್ರೀಕರಣವು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಈ ಪ್ರಕರಣವನ್ನು ರಾಜಾಜಿನಗರ ಪೊಲೀಸ್ ಠಾಣೆಗೆ  ವರ್ಗಾವಣೆ ಮಾಡಿದ್ದು, ಇದರಂತೆ ನಟಿಗೆ ವಾರ್ನಿಂಗ್ ಕೊಟ್ಟ ಸಂಚಾರಿ ಪೊಲೀಸರು 500 ರೂ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂಗಿ, ತಾಯಿ ಜತೆ ಕೇದಾರನಾಥಕ್ಕೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಭೇಟಿ