Select Your Language

Notifications

webdunia
webdunia
webdunia
webdunia

ತಂಗಿ, ತಾಯಿ ಜತೆ ಕೇದಾರನಾಥಕ್ಕೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಭೇಟಿ

kedarnath

Sampriya

ಉತ್ತರಕಾಶಿ , ಸೋಮವಾರ, 13 ಮೇ 2024 (15:19 IST)
photo Courtesy Instagram
ಬಾಲಿವುಡ್ ನಟಿ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರು ತಮ್ಮ ತಾಯಿ, ಮಗಳು ಶಮಿಕಾ ಮತ್ತು ಸಹೋದರಿ ಶಮಿತಾ ಜೊತೆ ಕೇದಾರನಾಥಕ್ಕೆ ಭೇಟಿ ನೀಡಿ ಆಶೀರ್ವಾಡ ಪಡೆಯುವ ಮೂಲಕ ತಾಯಂದಿರ ದಿನವನ್ನು ನಟಿ ವಿಶೇಷವಾಗಿ ಆಚರಿಸಿದ್ದಾರೆ.

ಈಚೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾಗೆ ಸೇರಿದ 97 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಅದರ ಬೆನ್ನಲ್ಲೇ ಕರಾವಳಿ ಬೆಡಗಿ ಶಿಲ್ಪಾ ಅವರು ಮಂಗಳೂರಿನಲ್ಲಿ ನಡೆದ ಕೋಲ, ನಾಗಮಂಡಲದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಅದಲ್ಲದೆ ಪ್ರಸಿದ್ಧ ಕಾಮಾಕ್ಷ ದೇವಸ್ಥಾನಕ್ಕೂ ಭೇಟಿ ನೀಡಿದರು.

ಈ ಬೆನ್ನಲ್ಲೇ ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಮ್ಮ ಮತ್ತು ಸಹೋದರಿ ಜೊತೆ ದೇವರ ಸನ್ನಿಧಿಯಲ್ಲಿ ನಟಿ ಕಾಲ ಕಳೆದಿದ್ದಾರೆ. ಈ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಶಿಲ್ಪಾ ಅವರು ಹಲವು ವರ್ಷಗಳ ನಂತರ ಕೆಡಿ ಸಿನಿಮಾದಲ್ಲಿ ಅಭಿಮಯಿಸುವ ಮೂಲಕ ನಟನೆಗೆ ವಾಪಾಸ್ಸಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಜಯರಾಂ ಕೊನೆಯ ಮಾತು, ಆಕೆ ಸಾವಿಗೆ ಕಾರಣ ತಿಳಿಸಿದ ಸ್ನೇಹಿತ