Select Your Language

Notifications

webdunia
webdunia
webdunia
webdunia

ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಟ್ಟ ಸಂಜನಾ ಇನ್ಮುಂದೆ ಇಲ್ಲಿ ಸೆಟಲ್ ಆಗಲಿದ್ದಾರೆ

Sanjana Burli

Krishnaveni K

ಬೆಂಗಳೂರು , ಶುಕ್ರವಾರ, 15 ನವೆಂಬರ್ 2024 (09:41 IST)
ಬೆಂಗಳೂರು: ಜೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಪಾತ್ರ ಅಂತ್ಯವಾಗಿದ್ದು, ನಟಿ ಸಂಜನಾ ಬುರ್ಲಿ ಧಾರವಾಹಿಯಿಂದ ಹೊರಬಂದಿದ್ದಾರೆ.

ಸಂಜನಾ ಸೀರಿಯಲ್ ಬಿಟ್ಟಿದ್ದಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ಹೇಳಿರಲಿಲ್ಲ. ಆದರೆ ನಾನು ನನ್ನ ಭವಿಷ್ಯದ ದೃಷ್ಟಿಯಿಂದ ಧಾರವಾಹಿ ಬಿಡುವ ನಿರ್ಧಾರಕ್ಕೆ ಬಂದೆ. ಸದ್ಯದಲ್ಲೇ ನನ್ನ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳಲಿದ್ದೇನೆ ಎಂದಿದ್ದರು. ಆದರೆ ಈಗ ಧಾರವಾಹಿ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಅವರೇ ಸಂಜನಾ ಸೀರಿಯಲ್ ಬಿಡಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಯೂ ಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜನಾ ಧಾರವಾಹಿ ಬಿಟ್ಟಿದ್ದಕ್ಕೆ ಕಾರಣವೇನೆಂದು ಆರೂರು ಜಗದೀಶ್ ಹೇಳಿದ್ದಾರೆ. ಸಂಜನಾಗೆ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದ್ದಳು. ಅವರಿಗೆ ಸಿನಿಮಾಗಳು ಕೈ ಹಿಡಿಯಲಿಲ್ಲ. ಇನ್ನೊಂದು ಧಾರವಾಹಿ ಮಾಡಿದರೂ ಇಷ್ಟೊಂದು ದೊಡ್ಡ ಹಿಟ್ ಆಗುತ್ತದೆ ಎಂಬುದಕ್ಕೆ ಖಾತ್ರಿ ಇರಲಿಲ್ಲ. ಹೀಗಾಗಿ ಅವಳ ಭವಿಷ್ಯದ ದೃಷ್ಟಿಯಿಂದ ಉನ್ನತ ವಿದ್ಯಾಭ್ಯಾಸ ಮಾಡುವ ನಿರ್ಧಾರ ತೆಗೆದುಕೊಂಡಾಗ ನಮಗೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಅವಳು ದೆಹಲಿಗೆ ಹೋಗಿ ಉನ್ನತ ವಿದ್ಯಾಭ್ಯಾಸ ಮಾಡಲು ನಿರ್ಧರಿಸಿದ್ದಾಳೆ. ಅವಳಿಗೆ ಒಳ್ಳೆಯದಾಗಲಿ. ನಾನು ಚಾನೆಲ್ ಜೊತೆ ಮಾತನಾಡಿ ಪರ್ಮಿಷನ್ ಕೊಡಿಸಿದೆ. ಆಕೆಯ ಪಾತ್ರವನ್ನು ಬೇರೆಯವರು ರಿಪ್ಲೇಸ್ ಮಾಡಿದರೂ ಜನರಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬ ಖಾತ್ರಿಯಿರಲಿಲ್ಲ. ಹೀಗಾಗಿ ಪಾತ್ರವನ್ನೇ ಮುಗಿಸಿದೆವು.

ಎಲ್ಲರಿಗೂ ಗೊತ್ತಿರುವ ಹಾಗೆ ಸಂಜನಾ ಮೆಡಿಕಲ್ ಎಂಜಿನಿಯರಿಂಗ್ ಪದವೀಧರೆ. ಇದೀಗ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರು ದೆಹಲಿಗೆ ತೆರಳಲಿರುವುದಾಗಿ ಆರೂರು ಜಗದೀಶ್ ಹೇಳಿದ್ದಾರೆ. ಇದೇ ಕಾರಣಕ್ಕೆ ಸೀರಿಯಲ್ ಬಿಟ್ಟಿದ್ದಾರೆ ಎಂಬ ಅಂಶವನ್ನೂ ಅವರು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರ್ಯಾಂಡ್ ಆಗಿ ನಡೆಯಿತು ಮಂಜು ಪಾವಗಡ ಮದುವೆ, ಶುಭಕೋರಿದ ನಟಿ ಶುಭ ಪೂಂಜಾ