ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಕೀರ್ತಿ ಪಾತ್ರಧಾರಿ ತನ್ವಿ ರಾವ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ನೋಡಿ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.
ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ನಾಯಕನ ಮಾಜಿ ಪ್ರೇಯಸಿ ಕೀರ್ತಿ ಪಾತ್ರ ಮಾಡುತ್ತಿರುವ ತನ್ವಿ ರಾವ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು. ಆದರೆ ಕೆಲವು ದಿನಗಳ ಹಿಂದಿನ ಎಪಿಸೋಡ್ ನಲ್ಲಿ ವಿಲನ್ ಕಾವೇರಿ ಕುತಂತ್ರಕ್ಕೆ ಬಲಿಯಾಗಿ ಕೀರ್ತಿ ಗುಡ್ಡದ ಮೇಲಿನಿಂದ ಪ್ರಪಾತಕ್ಕೆ ಬೀಳುತ್ತಾಳೆ. ಆಕೆ ಸತ್ತೇ ಹೋದಳು ಎಂದೇ ಬಿಂಬಿಸಲಾಗುತ್ತದೆ.
ಇದರಿಂದ ಕೀರ್ತಿ ಅಭಿಮಾನಿಗಳು ಭಾರೀ ಬೇಸರಗೊಂಡಿದ್ದರು. ಈ ಧಾರವಾಹಿಯಲ್ಲಿ ನಾಯಕಿಯನ್ನೂ ಮೀರಿಸುವ ಹಾಗೆ ತನ್ವೀ ನಟಿಸುತ್ತಿದ್ದಾರೆ. ಅವರೂ ಕೂಡಾ ಈ ಧಾರವಾಹಿಯಲ್ಲಿ ಒಂದು ರೀತಿಯ ನಾಯಕಿಯೇ. ಹೀಗಾಗಿ ಅವರನ್ನು ಸಾಯಿಸಬೇಡಿ, ವಾಪಸ್ ಕರೆಸಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದರು.
ಇದೀಗ ಕೀರ್ತಿ ಪಾತ್ರಧಾರಿ ವಾಪಸ್ ಆಗಿದ್ದಾರೆ. ಸತ್ತೇ ಹೋಗಿದ್ದಾಳೆಂದು ಅಂದುಕೊಂಡಿದ್ದ ಕೀರ್ತಿ ಹಳೆಯ ಕಾರೊಂದರಲ್ಲಿ ಸಿಕ್ಕಿ ಹಾಕಿಕೊಂಡು ಅಳುತ್ತಿರುವ ದೃಶ್ಯವೊಂದು ಧಾರವಾಹಿಯಲ್ಲಿ ಬಂದಿದೆ. ಇದನ್ನು ನೋಡಿ ಕೀರ್ತಿ ವಾಪಸ್ ಬಂದಳು ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ.