Publish Date: Sun, 06 Oct 2024 (12:13 IST)
Updated Date: Sun, 06 Oct 2024 (12:15 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮೊದಲ ವಾರವೇ ಎಲಿಮಿನೇಟ್ ಆದವರು ಯಾರು ಎಂಬ ಕುತೂಹಲಕ್ಕೆ ಇಂದು ಅಧಿಕೃತವಾಗಿ ತೆರೆಬೀಳಲಿದೆ. ಆದರೆ ಅದಕ್ಕೆ ಮೊದಲು ಯಾರು ಎಲಿಮಿನೇಟ್ ಆಗಿರುವುದು ಎಂಬ ಮಾಹಿತಿ ಹೊರಬಿದ್ದಿದೆ.
ನಿನ್ನೆ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಹಾಗೂ ಮಾನಸಾ ಸೇಫ್ ಆಗಿದ್ದರು. ಈ ವಾರ ಮನೆಯಿಂದ ಲಾಯರ್ ಜಗದೀಶ್ ಹೊರಹೋಗಬಹುದು ಎಂದು ಮನೆಯವರೆಲ್ಲರೂ ಅಭಿಪ್ರಾಯ ಪಟ್ಟಿದ್ದರು. ಆದರೆ ಜಗದೀಶ್ ಸೇಫ್ ಆಗಿದ್ದಾರೆ ಎನ್ನಲಾಗಿದೆ.
ಈ ವಾರವಿಡೀ ಕಿರಿಕ್ ಮಾಡಿ ಬಿಗ್ ಬಾಸ್ ಗೇ ಚಾಲೆಂಜ್ ಮಾಡಿದ್ದ ಲಾಯರ್ ಜಗದೀಶ್ ಗೆ ನಿನ್ನೆ ಕಿಚ್ಚ ಸುದೀಪ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡರು. ಬಿಗ್ ಬಾಸ್ ಶೋವನ್ನು ಬಂದ್ ಮಾಡಿಸ್ತೀನಿ ಎಂದಿದ್ದ ಜಗದೀಶ್ ಗೆ ನಿಮ್ಮಪ್ಪನಾಣೆಗೂ ಸಾಧ್ಯವಿಲ್ಲ ಎಂದು ಸುದೀಪ್ ತಮ್ಮದೇ ಶೈಲಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು.
ಇದೀಗ ಮೊದಲ ವಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಯಮುನಾ ಮನೆಗೆ ಬಂದಾಗಲೇ ಕಿರಿಕ್ ಗಳಿಂದ ಗಮನ ಸೆಳೆದಿದ್ದರು. ಆದರೆ ವೀಕ್ಷಕರು ಅವರಿಗೆ ಹೆಚ್ಚು ಮತ ನೀಡಿಲ್ಲ ಎನ್ನಲಾಗಿದೆ. ಕಡಿಮೆ ವೋಟ್ ಪಡೆದ ಹಿನ್ನಲೆಯಲ್ಲಿ ಒಂದೇ ವಾರಕ್ಕೆ ಯಮುನಾ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.