ಮದುವೆ ಸಂಭ್ರಮ ಬಳಿಕ ಯುವರತ್ನ ಶೂಟಿಂಗ್ ಗೆ ಹಾಜರಾಗಲಿರುವ ಪುನೀತ್ ರಾಜ್ ಕುಮಾರ್

ಮಂಗಳವಾರ, 21 ಮೇ 2019 (08:24 IST)
ಬೆಂಗಳೂರು: ಡಾ. ರಾಜ್ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಕಳೆಗಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಮದುವೆಯಲ್ಲಿ ರಾಜ್ ಕುಟುಂಬ ಬ್ಯುಸಿಯಾಗಿದೆ.


ಡಾ. ರಾಜ್ ಹುಟ್ಟೂರಾದ ಗಾಜನೂರಿನ ನಿವಾಸದಲ್ಲಿ ವಿವಾಹಕ್ಕೆ ಮೊದಲು ಅರಿಶಿನ ಶಾಸ್ತ್ರ ಕಾರ್ಯಕ್ರಮ ನೆರವೇರಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜ್ ಕುಟುಂಬ ಪಾಲ್ಗೊಂಡಿದೆ.

ಕುಟುಂಬ ಸಮೇತರಾಗಿ ವಿದೇಶ ಪ್ರವಾಸ ಹೋಗಿದ್ದ ಪುನೀತ್ ಇದೀಗ ಯುವರಾಜ್ ಮದುವೆಗಾಗಿ ಮರಳಿ ಬಂದಿದ್ದು, ಮದುವೆ ಸಂಭ್ರಮ ಮುಗಿದ ಬಳಿಕ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಯವರೆಗೆ ಪುನೀತ್ ಫ್ಯಾಮಿಲಿ ಬ್ರೇಕ್ ಟೈಮ್ ಎಂಜಾಯ್ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಐಶ್ವರ್ಯಾ ರೈಯನ್ನೇ ತಮಾಷೆ ಮಾಡಿದ ಮಾಜಿ ಗೆಳೆಯ ವಿವೇಕ್ ಓಬೇರಾಯ್ ಗೆ ನೋಟಿಸ್!