ದರ್ಶನ್ ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೇಲೂ ಮುನಿರತ್ನಗೆ ಬೈದ ಅಭಿಮಾನಿಗಳು

ಸೋಮವಾರ, 20 ಮೇ 2019 (12:43 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ಪ್ರಾರಂಭವಾಗಿ ಎರಡು ವರ್ಷೇ ಆಗುತ್ತಾ ಬಂದರೂ ಇನ್ನೂ ತೆರೆ ಕಂಡಿಲ್ಲ ಎಂದು ಇಷ್ಟು ದಿನ ಅಭಿಮಾನಿಗಳು ಬೇಸರದಲ್ಲಿದ್ದರು.


ಕಾಂಗ್ರೆಸ್ ಶಾಸಕರೂ ಆಗಿರುವ ನಿರ್ಮಾಪಕ ಮುನಿರತ್ನ ಕೂಡಾ ಸಿನಿಮಾ ರಿಲೀಸ್ ಬಗ್ಗೆ ಏನನ್ನೂ ಮಾತನಾಡುತ್ತಿರಲಿಲ್ಲ. ಆದರೆ ಇದೀಗ ಮುನಿರತ್ನ ಚುನಾವಣೆ ಎಲ್ಲಾ ಮುಗಿದ ಮೇಲೆ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ.

ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದರೂ ದರ್ಶನ್ ಅಭಿಮಾನಿಗಳ ಸಿಟ್ಟು ಕಡಿಮೆಯಾಗಿಲ್ಲ. ಇಷ್ಟು ತಡವಾಗಿ ರಿಲೀಸ್ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮುನಿರತ್ನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮ ರಾಜಕೀಯ ಕಾರಣಕ್ಕಾಗಿ ನಮ್ಮ ಡಿ ಬಾಸ್ ಸಮಯ ಹಾಳು ಮಾಡಿದಿರಿ ಎಂದು ಮುನಿರತ್ನ ಮೇಲೆ ಅಭಿಮಾನಿಗಳು ಸಿಟ್ಟು ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಪುತ್ರಿಗಾಗಿ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡ ಕಿಚ್ಚ ಸುದೀಪ್