ಐಶ್ವರ್ಯಾ ರೈಯನ್ನೇ ತಮಾಷೆ ಮಾಡಿದ ಮಾಜಿ ಗೆಳೆಯ ವಿವೇಕ್ ಓಬೇರಾಯ್ ಗೆ ನೋಟಿಸ್!

ಮಂಗಳವಾರ, 21 ಮೇ 2019 (08:21 IST)
ಮುಂಬೈ: ವಿವೇಕ್ ಓಬೇರಾಯ್ ಮತ್ತು ಐ‍ಶ್ವರ್ಯಾ ರೈ ಒಂದು ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗ ಇಬ್ಬರೂ ತಮ್ಮದೇ ಸಂಸಾರದಲ್ಲಿ ಇಬ್ಬರೂ ಬ್ಯುಸಿ.


ಹಾಗಿದ್ದರೂ ಈಗ ವಿವೇಕ್ ಓಬೇರಾಯ್ ಹಳೆಯ ಪ್ರೇಮಿ ಐಶ್ವರ್ಯಾ ಕುರಿತಾದ ಮೆಮೆಯೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ಅದೂ ಎಕ್ಸಿಟ್ ಪೋಲ್ ಕುರಿತಾದ ತಮಾಷೆಯ ಫೋಟೋ ಒಂದನ್ನು ಪ್ರಕಟಿಸಿ ಇದು ರಾಜಕೀಯ ಅಲ್ಲ, ಕೇವಲ ತಮಾಷೆಗಾಗಿ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋದಲ್ಲಿ ಐಶ್ವರ್ಯಾ ಮೊದಲನೆಯದಾಗಿ ಸಲ್ಮಾನ್ ಖಾನ್ ಜತೆಗೆ ಇದ್ದು ಆ ಫೋಟೋದ ಜತೆಗೆ ಒಪಿನಿಯನ್ ಪೋಲ್ ಎಂದು ಬರೆಯಲಾಗಿದೆ. ಎರಡನೇ ಫೋಟೋದಲ್ಲಿ ಐಶ್ ವಿವೇಕ್ ಓಬೇರಾಯ್ ಜತೆಗಿದ್ದು, ಇದರಲ್ಲಿ ಎಕ್ಸಿಟ್ ಪೋಲ್ ಎಂದು ಬರೆಯಲಾಗಿದೆ. ಕೊನೆಯದಾಗಿ ಅಭಿಷೇಕ್ ಜತೆಗಿನ ಐಶ್ವರ್ಯಾ ಫ್ಯಾಮಿಲಿ ಫೋಟೋವನ್ನು ಪ್ರಕಟಿಸಿ ರಿಸಲ್ಟ್ ಎಂಬ ಅಡಿಬರಹದೊಂದಿಗೆ ಬರೆಯಲಾಗಿದೆ. ಆದರೆ ವಿವೇಕ್ ರ ಈ ತಮಾಷೆ ಐಶ್ವರ್ಯಾ ಅಥವಾ ಸಲ್ಮಾನ್ ಕೋಪಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಆದರೆ ಹೀಗೆ ತಮಾಷೆ ಮಾಡಲು ಹೋಗಿ ವಿವೇಕ್ ಓಬೇರಾಯ್ ಇದೀಗ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರ ಮಹಿಳಾ ಆಯೋಗ ಐಶ್ವರ್ಯಾರನ್ನು ತಮಾಷೆ ಮಾಡಿದ್ದಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿಚ್ಚ ಸುದೀಪ್ ಮಗಳಿಗೆ ವಿಶ್ ಮಾಡಿದ ಖ್ಯಾತ ಖಳನಟ ಯಾರು ಗೊತ್ತೇ?