ಸುಮ್ ಸುಮ್ನೆ ಸಿನಿಮಾ ಒಪ್ಕೊಳ್ಳಲ್ವಂತೆ ಅನುಷ್ಕಾ ಶರ್ಮಾ

ಬುಧವಾರ, 15 ಮೇ 2019 (07:36 IST)
ಮುಂಬೈ: ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ಯಾವುದೇ ಸಿನಿಮಾ ಒಪ್ಕೊಂಡಿಲ್ಲ. ಇದಕ್ಕೆ ಕಾರಣವೇನಿರಬಹುದು ಎಂದು ಹಲವು ಊಹಾಪೋಹಗಳು ಹಬ್ಬಿದ್ದವು.


ಆದರೆ ಇದೀಗ ಅನುಷ್ಕಾ ತಾವು ಸಿನಿಮಾದಿಂದ ಕಾಣೆಯಾಗುತ್ತಿರುವುದಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ.

‘ಒಂದೇ ವರ್ಷದಲ್ಲಿ ಕಠಿಣ ಪರಿಶ್ರಮ ಪಡಬೇಕಾದ ಹಲವು ಸಿನಿಮಾಗಳನ್ನು ಮಾಡಿದೆ. ತುಂಬಾ ಬ್ಯುಸಿಯಾಗಿದ್ದೆ. ಈಗ ನಾನು ನಟಿಯಾಗಿ ಸುಭದ್ರ ಸ್ಥಾನಕ್ಕೆ ತಲುಪಿದ್ದೇನೆ. ಈಗಲೂ ನಾನು ಕಂಡ ಕಂಡ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳಬೇಕೆಂದಿಲ್ಲ. ಹೀಗಾಗಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಮಲಿ ಧಾರವಾಹಿಗೆ 300 ರ ಸಂಭ್ರಮ: ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕಾಲೆಳೆದ ಪ್ರೇಕ್ಷಕರು