Publish Date: Fri, 10 May 2019 (07:13 IST)
Updated Date: Fri, 10 May 2019 (07:15 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿ ಕೇಳಿ ಬಹುಶಃ ಅಭಿಮಾನಿಗಳಿಗೂ ಸುಸ್ತಾಗಿರಬೇಕು. ಇದೀಗ ಸಲ್ಮಾನ್ ತಮ್ಮ ಹೊಸ ಸರ್ಪ್ರೈಸ್ ಕೊಡಲು ಚಿಂತನೆ ನಡೆಸಿದ್ದಾರಂತೆ.
ಆದರೆ ಇದು ಮದುವೆ ವಿಷ್ಯ ಅಲ್ಲ. ಸಲ್ಲು ಮಿಯಾ ಮದುವೆಯಾಗದೇ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಈಗಾಗಲೇ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಬಾಡಿಗೆ ತಾಯಿ ಮೂಲಕ ಗಂಡು ಮಗುವನ್ನು ಪಡೆದಿದ್ದಾರೆ. ಕರಣ್ ಜೋಹರ್ ಕೂಡಾ ಮದುವೆಯಾಗದೇ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಒಂದು ವೇಳೆ ಸಲ್ಮಾನ್ ಕೂಡಾ ಈ ರೀತಿ ಮಕ್ಕಳನ್ನು ಪಡೆದರೆ ಈ ಸ್ಟಾರ್ ಗಳ ಪಾಲಿಗೆ ಸೇರ್ಪಡೆಯಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ