ಕಿಚ್ಚ ಸುದೀಪ್ ಮಗಳಿಗೆ ವಿಶ್ ಮಾಡಿದ ಖ್ಯಾತ ಖಳನಟ ಯಾರು ಗೊತ್ತೇ?

ಮಂಗಳವಾರ, 21 ಮೇ 2019 (08:13 IST)
ಬೆಂಗಳೂರು: ಕಿಚ್ಚ ಸುದೀಪ್ ನಿನ್ನೆ ಇಡೀ ದಿನ ಫ್ಯಾಮಿಲಿಗಾಗಿ ಮೀಸಲಿಟ್ಟಿದ್ದರು. ಮಗಳು ಸಾನ್ವಿ ಬರ್ತ್ ಡೇಗಾಗಿ ನಿನ್ನೆ ದಿನ ಚಿತ್ರೀರಣಕ್ಕೂ ಬ್ರೇಕ್ ಹಾಕಿ ಮಗಳ ಜತೆ ಕಾಲ ಕಳೆದಿದ್ದರು.

 

ಕಿಚ್ಚನ ಮಗಳ ಬರ್ತ್ ಡೇ ಎಂದರೆ ಕೇಳಬೇಕೇ? ಅಭಿಮಾನಿಗಳು ಟ್ವಿಟರ್ ಮೂಲಕ ಖುದ್ದಾಗಿ ಕಿಚ್ಚನಿಗೇ ಟ್ವೀಟ್ ಮಾಡಿ ಸಾನ್ವಿಗೆ ವಿಶ್ ಮಾಡಿದ್ದರು. ಇದರಿಂದ ಖುಷಿಯಾದ ಕಿಚ್ಚ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಈ ನಡುವೆ ಕಿಚ್ಚ ಸುದೀಪ್ ಮಗಳಿಗೆ ಖ್ಯಾತ ಖಳ ನಟರೊಬ್ಬರಿಂದ ವಿಶ್ ಬಂದಿದೆ. ಅದು ಕಬೀರ್ ದುಹಾ ಸಿಂಗ್ ರಿಂದ. ಕನ್ನಡ, ತೆಲುಗು, ತಮಿಳು ಇತ್ಯಾದಿ ಚಿತ್ರರಂಗದಲ್ಲಿ ಈಗ ವಿಲನ್ ಆಗಿ ಮಿಂಚುತ್ತಿರುವ ಕಬೀರ್ ಸಾನ್ವಿಗೆ ವಿಶ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ನಿಮ್ಮ ಪ್ರೀತಿಗೆ ಧನ್ಯವಾದಗಳು ಗೆಳೆಯ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದರ್ಶನ್ ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೇಲೂ ಮುನಿರತ್ನಗೆ ಬೈದ ಅಭಿಮಾನಿಗಳು