ರೆಬಲ್ ಸ್ಟಾರ್ ಅಂಬರೀಶ್ ಆಸೆ ನೆರವೇರಿಸಿದ ಸುಮಲತಾ ಅಂಬರೀಶ್

ಸೋಮವಾರ, 20 ಮೇ 2019 (08:57 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಗೆ ತಮ್ಮ ಸ್ವಂತ ಮನೆಗೆ ಶಿಫ್ಟ್ ಆಗಬೇಕೆಂದು ಭಾರೀ ಆಸೆಯಿತ್ತು. ಆದರೆ ನವೀಕರಣ ಕೆಲಸ ಪೂರ್ತಿಗೊಳ್ಳದೇ ಅವರ ಕೊನೆ ದಿನಗಳಲ್ಲಿ ಅಲ್ಲಿ ಕಳೆಯಲು ಸಾಧ್ಯವಾಗಿರಲೇ ಇಲ್ಲ.
 
ಇದೀಗ ನವೀಕರಣ ಕೆಲಸ ಪೂರ್ತಿಯಾಗಿದ್ದು, ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಜತೆಗೆ ಅಂಬಿ ಆಸೆಯಂತೆ ಜೆಪಿ ನಗರದ ಸ್ವಂತ ಮನೆಗೆ ಶಿಫ್ಟ್ ಆಗಿದ್ದಾರೆ.

ನಿನ್ನೆಯಷ್ಟೇ ಬೆಂಗಳೂರಿನ ನಿವಾಸದಲ್ಲಿ ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡು ಸುಮಲತಾ ಮತ್ತು ಕುಟುಂಬ ಈ ಮನೆಗೆ ಶಿಫ್ಟ್ ಆಗಿದ್ದಾರೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಗೆಲುವು ಸಾಧಿಸುತ್ತಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಿಲೀಸ್ ಗೆ ರೆಡಿಯಾದ ಕಿಚ್ಚ ಸುದೀಪ್ ಪೈಲ್ವಾನ್