ಕಿಚ್ಚ ಸುದೀಪ್ ಅಳಿಯನೂ ಚಿತ್ರರಂಗಕ್ಕೆ ಪದಾರ್ಪಣೆ

ಶುಕ್ರವಾರ, 17 ಮೇ 2019 (08:22 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ತಮ್ಮ ಪುತ್ರ, ಪುತ್ರಿಯರು, ಸಹೋದರಿಯರನ್ನು ಕರೆತರುತ್ತಿರುವುದು ಹೊಸದೇನಲ್ಲ. ಇದೀಗ ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.


ಸುದೀಪ್ ಅಳಿಯ ಸಂಚಿತ್ ಈಗಾಗಲೇ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೇ ಮೊದಲ ಬಾರಿಗೆ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಹೀಗಾಗಿ ಮುಂಬೈನಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ನನ್ನ ಕೈಲಾಗದ ನೃತ್ಯವನ್ನು ನನ್ನ ಅಳಿಯನಾದರೂ ಗಂಭೀರವಾಗಿ ತೆಗೆದುಕೊಂಡು ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಅವನಿಗೆ ಯಶಸ್ಸು ಸಿಗಲಿ ಎಂದು ಕಿಚ್ಚ ಹಾರೈಸಿದ್ದಾರೆ. ಆದರೆ ಯಾವ ಸಿನಿಮಾ ಎನ್ನುವುದರ ಮಾಹಿತಿ ಸದ್ಯದಲ್ಲೇ ಹೊರ ಹಾಕಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮ್ಮದೇ ಹಿಟ್ ಸಿನಿಮಾದ ಭಾಗ 2 ಮಾಡುತ್ತಿದ್ದಾರೆ ಶಿವರಾಜ್ ಕುಮಾರ್: ಡೀಟೈಲ್ಸ್ ಇಲ್ಲಿದೆ