ಮದುವೆ ಆದ ಮಾತ್ರಕ್ಕೆ ನಾನು ಆಕ್ಟಿಂಗ್ ಮಾಡಲ್ಲ ಅಂತೇನಿಲ್ಲ: ಐಂದ್ರಿತಾ ರೇ

ಶುಕ್ರವಾರ, 17 ಮೇ 2019 (08:11 IST)
ಬೆಂಗಳೂರು: ಮದುವೆಯಾದ ಮೇಲೆ ನಟಿಮಣಿಯರು ಬಣ್ಣ ಹಚ್ಚಲ್ಲ ಎನ್ನುವುದು ಈಗಿಲ್ಲ. ಇದೀಗ ಸ್ಯಾಂಡಲ್ ವುಡ್ ನಲ್ಲೂ ಟ್ರೆಂಡ್ ಆಗುತ್ತಿದೆ.


ಇತ್ತೀಚೆಗಷ್ಟೇ ಮದುವೆಯಾದ ಐಂದ್ರಿತಾ ರೇ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡು ಇದೀಗ ಮತ್ತೆ ಚಿತ್ರರಂಗಕ್ಕೆ ಮರಳುವ ಸುದ್ದಿ ನೀಡಿದ್ದಾರೆ. ನೆನಪಿರಲಿ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾಗೆ ನಾಯಕಿಯಾಗಿ ಐಂದ್ರಿತಾ ಆಯ್ಕೆಯಾಗಿದ್ದಾರೆ.

ಈ ಮೂಲಕ ಮದುವೆಯಾದ ಬಳಿಕ ಮೊದಲ ಸಿನಿಮಾಗೆ ಸಹಿ ಹಾಕಿದ್ದಾರೆ. ಇದಕ್ಕೂ ಮೊದಲು ಮೇಘನಾ ರಾಜ್ ಕೂಡಾ ಮದುವೆಯಾದ ಹಲವು ದಿನಗಳ ನಂತರ ಸೃಜನ್ ಲೋಕೇಶ್ ಜತೆಗೆ ಹೊಸ ಸಿನಿಮಾ ಒಪ್ಪಿಕೊಂಡ ಸುದ್ದಿ ನೀಡಿದ್ದರು. ಇದೀಗ ಐಂದ್ರಿತಾ ಸರದಿ. ಮದುವೆಯಾಯಿತು ಎಂದರೆ ಸಿನಿಮಾ ಮಾಡಬಾರದು ಎಂದು ರೂಲ್ಸ್ ಇದೆಯಾ? ಮದುವೆಯಾದ ಮಾತ್ರಕ್ಕೆ ನಟಿಯರ ಬದುಕು ಮುಗಿಯಿತು ಎಂದರ್ಥವಲ್ಲ ಎಂದು ಐಂದ್ರಿತಾ ತಮ್ಮ ಕಮ್ ಬ್ಯಾಕ್ ಬಗ್ಗೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಗೀತೋಪಕರಣ ಕೊಂಡೊಯ್ಯಲು ಬಿಡದ ಏರ್ ಲೈನ್ಸ್ ಅಧಿಕಾರಿಗಳ ವಿರುದ್ಧ ಗಾಯಕಿ ಶ್ರೇಯಾ ಘೋಷಾಲ್ ಕಿಡಿ