ಟಿವಿಗೆ ಬಂತು ನಟಸಾರ್ವಭೌಮ! ಏನಂತಾರೆ ವೀಕ್ಷಕರು

ಬುಧವಾರ, 15 ಮೇ 2019 (07:48 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಈ ವರ್ಷ ತೆರೆ ಕಂಡು ಹಿಟ್ ಲಿಸ್ಟ್ ಗೆ ಸೇರಿದ ಸಿನಿಮಾಗಳಲ್ಲೊಂದು. ಇದೀಗ ಟಿವೀಲಿ ಫಸ್ಟ್ ಟೈಮ್ ಪ್ರದರ್ಶನವಾಗುತ್ತಿದೆ.


ನಟಸಾರ್ವಭೌಮ ಸಿನಿಮಾ ಮೊದಲ ಬಾರಿಗೆ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೇ 26 ರಂದು ಭಾನುವಾರ ಪ್ರಸಾರವಾಗಲಿದೆ.

ಪುನೀತ್ ರಾಜ್ ಕುಮಾರ್ ಜತೆಗೆ ಅನುಪಮಾ, ರಚಿತಾ ರಾಂ ತಾರಾಗಣ ಸಿನಿಮಾದಲ್ಲಿದೆ. ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಕೇಳಿ ಪ್ರೇಕ್ಷಕರು ಖುಷ್ ಆಗಿದ್ದು, ಅಪ್ಪು ಸರ್ ಮತ್ತು ಅನುಪಮಾ ಕಾಂಬಿನೇಷನ್ ಸೀನ್ ಗಾಗಿ ಕಾಯುತ್ತಿದ್ದೇವೆ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಷ್ಟದ ಸಮಯದಲ್ಲೂ ಬೆಂಬಲವಾಗಿ ನಿಂತ ಕಿಚ್ಚ ಸುದೀಪ್ ಗೆ ದುನಿಯಾ ವಿಜಯ್ ಹೇಳಿದ್ದೇನು?