Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವೀಕೆಂಡ್ ವಿತ್ ರಮೇಶ್ ಬಗ್ಗೆ ಜನರಿಗೆ ಭ್ರಮನಿರಸ! ಸಾಮಾಜಿಕ ಜಾಲತಾಣದಲ್ಲಿ ಟೀಕೆ

webdunia
ಮಂಗಳವಾರ, 14 ಮೇ 2019 (07:36 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜನರಿಗೆ ಮೂಡಿಸಿದ್ದ ಕುತೂಹಲಕ್ಕೆ ತಕ್ಕ ಪ್ರದರ್ಶನ ಕಾಣುವಲ್ಲಿ ವಿಫಲವಾಗಿದೆ.


ಕಾರಣ ಮೊದಲ ಎಪಿಸೋಡ್ ನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಕರೆಸಿದ್ದು ಬಿಟ್ಟರೆ, ಉಳಿದೆಲ್ಲಾ ಎಪಿಸೋಡ್ ನಲ್ಲಿ ಸಿನಿಮಾ ಕಲಾವಿದರನ್ನು ಮಾತ್ರ ಕರೆಸಿ ಸಾಧಕರೆಂದು ಪರಿಚಯಿಸಲಾಗುತ್ತಿದೆ.

ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕರೆಸುತ್ತಿಲ್ಲ ಎನ್ನುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರೇಮಾ, ರಾಘವೇಂದ್ರ ರಾಜ್ ಕುಮಾರ್, ಪ್ರಕಾಶ್ ಬೆಳವಾಡಿ, ಶಶಿ ಕುಮಾರ್, ವಿನಯ್ ಪ್ರಸಾದ್ ಬಳಿಕ ಈ ವಾರವಾದರೂ ಸಿನಿಮೇತರ ಕ್ಷೇತ್ರದ ಸಾಧಕರು ಬರಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.

ಈ ವಾರ ಉಗ್ರಂ ಸಿನಿಮಾ ಖ್ಯಾತಿಯ ಶ್ರೀ ಮುರಳಿ ಸಾಧಕರ ಸೀಟ್ ನಲ್ಲಿ ಕೂರುತ್ತಿರುವುದು ಅಭಿಮಾನಿಗಳಿಗೆ ಭ್ರಮನಿರಸವುಂಟು ಮಾಡಿದೆ. ಹೀಗೇ ಆದರೆ ಕಾರ್ಯಕ್ರಮದ ಟಿಆರ್ ಪಿ ಇಳಿಯುವುದು ಖಂಡಿತಾ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಷ್ಟು ದಿನ ಸೈಲೆಂಟ್ ಆಗಿದ್ದ ದುನಿಯಾ ವಿಜಿ ಹೊಸ ಸುದ್ದಿಯೊಂದಿಗೆ ಪ್ರತ್ಯಕ್ಷ