ಕಷ್ಟದ ಸಮಯದಲ್ಲೂ ಬೆಂಬಲವಾಗಿ ನಿಂತ ಕಿಚ್ಚ ಸುದೀಪ್ ಗೆ ದುನಿಯಾ ವಿಜಯ್ ಹೇಳಿದ್ದೇನು?

ಬುಧವಾರ, 15 ಮೇ 2019 (07:44 IST)
ಬೆಂಗಳೂರು: ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯಲ್ಲಿ ಮೂಲೆಗುಂಪಾಗಿರುವ ದುನಿಯಾ ವಿಜಯ್ ಸಲಗ ಸಿನಿಮಾ ಮೂಲಕ ಇದೀಗ ನಿರ್ದೇಶಕನಾಗುತ್ತಿರುವ ಸಂಗತಿ ನಿಮಗೆಲ್ಲಾ ಗೊತ್ತೇ ಇದೆ.


ದುನಿಯಾ ವಿಜಯ್ ಹೊಸ ಪ್ರಯತ್ನಕ್ಕೆ ಯಾರು ಬಹಿರಂಗವಾಗಿ ಬೆನ್ನುತಟ್ಟಿದ್ದಾರೋ, ಬಿಟ್ಟಿದ್ದಾರೋ ಆದರೆ ಕಿಚ್ಚ ಸುದೀಪ್ ಕಡೆಯಿಂದ ವಿಜಿಗೆ ಬೆಂಬಲ ಸಿಕ್ಕಿದೆ. ಒಬ್ಬ ನಟ ನಿರ್ದೇಶಕನಾಗಿ ಮೇಲೇರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇದು ತಮ್ಮನ್ನು ತಾವೇ ಕಂಡುಕೊಳ್ಳಲು ಇರುವ ದಾರಿ. ಈ ಹೊಸ ಜವಾಬ್ಧಾರಿ, ಒತ್ತಡಗಳನ್ನು ಚೆನ್ನಾಗಿ ನಿಭಾಯಿಸಿ. ನಿಮಗೆ ನನ್ನ ಶುಭ ಹಾರೈಕೆಗಳು ಎಂದು ಸುದೀಪ್ ಪ್ರೀತಿಯಿಂದಲೇ ಸಂದೇಶ ಬರೆದಿದ್ದರು.

ಸುದೀಪ್ ಸಂದೇಶ ನೋಡಿ ಭಾವುಕರಾಗಿರುವ ವಿಜಯ್ ನಿಮ್ಮ ಬೆಂಬಲಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮಂಥ ಚಿತ್ರರಂಗದ ಹಿರಿಯರು ನನಗೆ ಬೆಂಬಲ ಕೋರುವುದರಿಂದ ನನಗೆ ದೇವರೂ ನನ್ನ ಕರ್ತವ್ಯ ನಿಭಾಯಿಸಲು ಶಕ್ತಿ ಕೊಡಬಹುದು ಎಂದು ನಂಬಿದ್ದೇನೆ ಎಂದು ವಿಜಯ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಬಾಂಗ್ 3 ಯಲ್ಲಿ ಸಲ್ಮಾನ್ ಖಾನ್ ಜತೆ ಶರ್ಟ್ ಬಿಚ್ಚಿ ಫೈಟ್ ಮಾಡಲಿರುವ ಕಿಚ್ಚ ಸುದೀಪ್