ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ.
ಮತ್ತೆ ಸಿನಿಮಾದಲ್ಲಿ ಖಂಡಿತಾ ಅಭಿನಯಿಸುವೆ ಎಂದಿದ್ದ ನಿಖಿಲ್ ಇದೀಗ ಹೊಸ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ನಿಖಿಲ್ ರಜನೀಕಾಂತ್ ಅಭಿನಯದ 2.0 ಸಿನಿಮಾ ನಿರ್ಮಾಪಕರ ಜತೆ ಸಿನಿಮಾ ಮಾಡಲಿದ್ದಾರೆ ಎಂದು ಈ ಹಿಂದೆ ಸುದ್ದಿ ಬಂದಿತ್ತು.
ಅದೀಗ ನಿಜವಾಗುತ್ತಿದೆ. ಆ ಪ್ರೊಡಕ್ಷನ್ ಹೌಸ್ ನವರೊಂದಿಗೆ ಹೊಸ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿಖಿಲ್ ಇದೀಗ ಬ್ಯುಸಿಯಾಗಿದ್ದಾರಂತೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅನೌನ್ಸ್ ಮೆಂಟ್ ಮಾಡಲಿದ್ದಾರೆ. ಅದಕ್ಕಿಂತ ಮೊದಲು ಚುನಾವಣಾ ಫಲಿತಾಂಶ ಏನಾಗುತ್ತದೋ ಎಂಬ ಕುತೂಹಲ ನಿಖಿಲ್ ಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ