ಸಂಗೀತೋಪಕರಣ ಕೊಂಡೊಯ್ಯಲು ಬಿಡದ ಏರ್ ಲೈನ್ಸ್ ಅಧಿಕಾರಿಗಳ ವಿರುದ್ಧ ಗಾಯಕಿ ಶ್ರೇಯಾ ಘೋಷಾಲ್ ಕಿಡಿ

ಗುರುವಾರ, 16 ಮೇ 2019 (09:20 IST)
ಮುಂಬೈ: ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸಂಗೀತೋಪಕರಣಗಳನ್ನು ಕೊಂಡೊಯ್ಯಲು ಅನುಮತಿ ನಿರಾಕರಿಸಿದ ಸಿಂಗಾಪುರ ಏರ್ ಲೈನ್ಸ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.


‘ಸಿಂಗಾಪುರ ಏರ್ ಲೈನ್ಸ್ ಗೆ ತಮ್ಮ ವಿಮಾನದಲ್ಲಿ ಸಂಗೀತಗಾರರು ಪ್ರಯಾಣಿಸುವುದು ಮತ್ತು  ಅವರ ಅಮೂಲ್ಯ ಸಂಗೀತೋಪಕರಣಗಳನ್ನು ತಮ್ಮ ಜತೆ ಕೊಂಡೊಯ್ಯುವುದು ಇಷ್ಟವಿಲ್ಲವೆನಿಸುತ್ತದೆ. ಅಂತೂ ಪಾಠ ಕಲಿತೆ’ ಎಂದು ಶ್ರೇಯಾ ಕಿಡಿ ಕಾರಿದ್ದರು.

ಶ್ರೇಯಾ ಟ್ವೀಟ್ ನೋಡಿ ಪ್ರತಿಕ್ರಿಯಿಸಿರುವ ಏರ್ ಲೈನ್ಸ್ ‘ಶ್ರೇಯಾ ನಿಮಗಾದ ತೊಂದರೆಗೆ ನಾವು ವಿಷಾಧಿಸುತ್ತೇವೆ. ನಮ್ಮ ಅಧಿಕಾರಿ ನಿಮ್ಮ ಜತೆ ಏನು ಹೇಳಿದ ಎಂಬುದನ್ನು ನಮಗೆ ತಿಳಿಸಿ’ ಎಂದು ಕೇಳಿದೆ. ಇದಕ್ಕೀಗ ಶ್ರೇಯಾ ಉತ್ತರಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಗೆ ಕೇಳುತ್ತಿದ್ದ ಅದೇ ಪ್ರಶ್ನೆ ಕೇಳಿ ಕೇಳಿ ಸುಸ್ತಾದ ರಮೇಶ್ ಅರವಿಂದ್ ಮಾಡಿದ್ದೇನು ಗೊತ್ತಾ?!