ರಾಕಿಂಗ್ ಸ್ಟಾರ್ ಯಶ್ ಉದ್ದ ಗಡ್ಡ ಬಿಟ್ಟಿದ್ದೂ ಒಳ್ಳೇದೇ ಆಯ್ತು!

ಬುಧವಾರ, 15 ಮೇ 2019 (08:03 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾಗಾಗಿ ಉದ್ದ ದಾಡಿ ಬಿಟ್ಟಿದ್ದು ಕೆಲವು ಹುಡುಗಿಯರಿಗೆ ಇಷ್ಟವಾಗಿಲ್ಲ. ಅಷ್ಟೇ ಏಕೆ ಸ್ವತಃ ಪತ್ನಿ ರಾಧಿಕಾ ಪಂಡಿತ್ ಅವರೇ ಗಡ್ಡ ಯಾವಾಗ ತೆಗಿಯೋದು ಎಂದು ಎಷ್ಟೋ ಬಾರಿ ಯಶ್ ಕಾಲೆಳೆದಿದ್ದು ಇದೆ.


ಆದರೆ ಯಶ್ ಗಡ್ಡ ಬಿಟ್ಟಿದ್ದಕ್ಕೂ ಒಳ್ಳೆದೇ ಆಯ್ತು ಎನ್ನಬಹುದು. ಇದೀಗ ಉದ್ದ ದಾಡಿ ಬಿಟ್ಟಿದ್ದಕ್ಕೆ ಯಶ್ ಹೊಸ ಜಾಹೀರಾತು ಉತ್ಪನ್ನವೊಂದಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

BEARDO ಎನ್ನುವ ಪುರುಷರ ಹೇರ್ ಕಲರಿಂಗ್, ಗಡ್ಡ ಬೆಳೆಯಲು ಸಹಾಯ ಮಾಡುವ ಹೇರ್ ಆಯಿಲ್ ಕಂಪನಿಗೆ ಯಶ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಗಡ್ಡ ಬಿಟ್ಟಿದ್ದಕ್ಕೂ ಒಳ್ಳೇದೇ ಆಯ್ತು ಎನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಟಿವಿಗೆ ಬಂತು ನಟಸಾರ್ವಭೌಮ! ಏನಂತಾರೆ ವೀಕ್ಷಕರು