Publish Date: Fri, 17 May 2019 (08:57 IST)
Updated Date: Fri, 17 May 2019 (08:59 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆತರುತ್ತಿರುವ ಅತಿಥಿಗಳ ಬಗ್ಗೆ ಪ್ರೇಕ್ಷಕರ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ಈ ವಾರ ಶ್ರೀಮುರಳಿ ಜತೆ ವೀಕೆಂಡ್ ವಿತ್ ರಮೇಶ್ ಮಾಡುತ್ತಿರುವುದು ವೀಕ್ಷಕರ ಅಸಮಾಧಾನ ಹೆಚ್ಚುವಂತೆ ಮಾಡಿದೆ.
ಸಾಧಕ ಎಂದು ಹೇಳಿಕೊಳ್ಳಲು ಶ್ರೀಮುರಳಿ ಸಾಧನೆ ಏನು? ಉಗ್ರಂ ಒಂದು ಸಿನಿಮಾವೊಂದೇ ಅವರ ಸಿನಿ ಜೀವನದಲ್ಲಿ ಮೈಲುಗಲ್ಲು.ಅದು ಬಿಟ್ಟರೆ ಅವರಿಂದ ಅತ್ಯುತ್ತಮ ಸಿನಿಮಾ ಬಂದಿಲ್ಲ.
ಇನ್ನು, ಸಾಧಕರು ಎನ್ನುವುದಕ್ಕೆ ಸಿನಿಮಾದವರು ಮಾತ್ರ ಇರುವುದಾ? ಬೇರೆ ಕ್ಷೇತ್ರದಲ್ಲಿರುವ ಸಾಧಕರನ್ನು ಯಾಕೆ ಕರೆತರುತ್ತಿಲ್ಲ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದು ವೀಕೆಂಡ್ ವಿತ್ ರಮೇಶ್ ಅಲ್ಲ, ರಮೇಶ್ ವಿತ್ ಫ್ರೆಂಡ್ಸ್, ವೀಕೆಂಡ್ ವಿತ್ ಸ್ಯಾಂಡಲ್ ವುಡ್ ಆಗುತ್ತಿದೆ ಎಂದು ಹೀಗೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ