Select Your Language

Notifications

webdunia
webdunia
webdunia
webdunia

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರ

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರ
ಬೆಂಗಳೂರು , ಮಂಗಳವಾರ, 11 ಜೂನ್ 2019 (09:47 IST)
ಬೆಂಗಳೂರು: ಐ ಲವ್ ಯೂ ಸಿನಿಮಾದಲ್ಲಿ ಉಪೇಂದ್ರ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡ ರಚಿತಾ ರಾಮ್ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ.


ಹಲವರು ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದಕ್ಕೆ ಇಷ್ಟವಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದಾದ ಬಳಿಕ ರಚಿತಾ ರಾಮ್ ಸಂದರ್ಶನವೊಂದರಲ್ಲಿ ಈ ಹಾಡಿನ ಶೂಟಿಂಗ್ ಮಾಡಿದ್ದು ಉಪೇಂದ್ರ ಎಂದು ಹೇಳಿದ್ದರಂತೆ. ಇದು ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರಗೆ ಸಿಟ್ಟು ತರಿಸಿದೆ.

ನಿರ್ದೇಶಕ ಚಂದ್ರು ಮತ್ತು ಕೊರಿಯಾಗ್ರಾಫರ್ ಚಿನ್ನಿ ಪ್ರಕಾಶ್ ಈ ಹಾಡನ್ನು ಸಂಯೋಜಿಸಿದ್ದರು. ಉಪೇಂದ್ರರ ಹೆಸರನ್ನೂ ಎಲ್ಲಾ ಸಂದರ್ಶನಗಳಲ್ಲಿ ರಚಿತಾ ವಿನಾಕಾರಣ ಹೇಳುತ್ತಿರುವುದು ಯಾಕೆ ಎಂಬುದು ಪ್ರಿಯಾಂಕಾ ಪ್ರಶ್ನೆ. ಒಂದು ವೇಳೆ ರಚಿತಾಗೆ ಈ ಹಾಡಿದ ದೃಶ್ಯಗಳು ಇಷ್ಟವಾಗದೇ ಇದ್ದಲ್ಲಿ ಶೂಟಿಂಗ್ ಸಮಯದಲ್ಲೇ ಹೇಳಬೇಕಿತ್ತು. ಅದು ಬಿಟ್ಟು ವಿನಾಕಾರಣ ಉಪ್ಪಿ ಹೆಸರು ಎಳೆದು ತರುತ್ತಿರುವುದು ಯಾಕೆ ಎಂದು ಪ್ರಿಯಾಂಕಾ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನ ಪಠ್ಯ ಪುಸ್ತಕದಲ್ಲಿ ರಜನೀಕಾಂತ್ ಪಾಠ