Select Your Language

Notifications

webdunia
webdunia
webdunia
webdunia

ಐ ಲವ್ ಯೂ ಅನ್ನಲು ಬಂದರು ಬ್ರಹ್ಮಾನಂದಂ!

ಐ ಲವ್ ಯೂ ಅನ್ನಲು ಬಂದರು ಬ್ರಹ್ಮಾನಂದಂ!
ಬೆಂಗಳೂರು , ಗುರುವಾರ, 6 ಜೂನ್ 2019 (14:00 IST)
ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರಿಗೆ ವ್ಯಾಪಕವಾಗಿ ಅಭಿಮಾನಿ ಬಳಗವಿದೆ. ಕನ್ನಡದಲ್ಲಿಯೂ ಆ ಸಂಖ್ಯೆಗೇನೂ ಕಡಿಮೆಯಿಲ್ಲ. ಇದೀಗ ಕನ್ನಡ ಚಿತ್ರವೊಂದರಲ್ಲಿ ಮುಖ್ಯವಾದ ಪಾತ್ರದಲ್ಲಿಯೇ ಅವರನ್ನು ನೋಡೋ ಅವಕಾಶ ಕನ್ನಡದ ಪ್ರೇಕ್ಷಕರಿಗೆ ಕೂಡಿ ಬಂದಿದೆ. ಯಾಕಂದ್ರೆ ಇದೇ ತಿಂಗಳ 14ರಂದು ಬಿಡುಗಡೆಯಾಗಲಿರೋ ಐ ಲವ್ ಯೂ ಚಿತ್ರದಲ್ಲಿ ಅವರು ನಟಿಸಿದ್ದಾರೆ.
ಐ ಲವ್ ಯೂ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ತೆಲುಗಿನಲ್ಲಿ ಹೇಳಿ ಕೇಳಿ ಬ್ರಹ್ಮಾನಂದಂ ಪ್ರಸಿದ್ಧರು. ಕನ್ನಡ ಪ್ರೇಕ್ಷಕರಿಗೂ ಅವರು ಪರಿಚಿತರೇ. ಹೀಗಿರೋದರಿಂದಲೇ ಬ್ರಹ್ಮಾನಂದಂ ಅವರಿಗೊಂದು ಪಾತ್ರ ಸೃಷ್ಟಿಸಿದ್ದಾರೆ. ಅದು ಎಲ್ಲರೂ ಅಂದುಕೊಂಳ್ಳುವಂತೆಯೇ ಕಾಮಿಡಿ ಪಾತ್ರ. ಆದರೆ, ಯಾರೂ ಊಹಿಸಲಾಗದಂಥಾ ಮಜಲುಗಳು ಅದಕ್ಕಿದೆಯಂತೆ.
webdunia
ಬ್ರಹ್ಮಾನಂದಂ ಇಲ್ಲಿ ನಾಯಕ ಮತ್ತು ನಾಯಕಿಯ ಸಂಬಂಧ ಕುದುರಿಸೋ ಹಾಸ್ಯಮಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಪಾತ್ರ ಇಡೀ ಕಥೆಯ ಬಹುಮುಖ್ಯ ಬಿಂದುವಿನಂಥಾದ್ದು. ಚಿತ್ರದ ಪ್ರಮುಖ ಘಟ್ಟಗಳಲ್ಲಿ ಈ ಪಾತ್ರ ನಿರ್ಣಾಯಕವಾಗಿ ನಡೆದುಕೊಳ್ಳುತ್ತೆ ಮತ್ತು ಚಿತ್ರದುದ್ದಕ್ಕೂ ಅದರ ಹಾಜರಿ ಇರುತ್ತದೆ. ಈ ಲವ್ ಯೂ ಚಿತ್ರದ ಮುಖ್ಯ ಸೆಳೆತಗಳಲ್ಲಿ ಬ್ರಹ್ಮಾನಂದಂ ನಟಿಸಿರೋ ಪಾತ್ರವೂ ಸೇರಿಕೊಂಡಿದೆ.
webdunia
ಬ್ರಹ್ಮಾನಂದಂ ಅವರು ಆರ್ ಚಂದ್ರು ಕಥೆ ಹೇಳಿದಾಕ್ಷಣವೇ ಇಂಪ್ರೆಸ್ ಆಗಿದ್ದರಂತೆ. ಅವರ ಪಾತ್ರದ ಬಗ್ಗೆಯಂತೂ ಮೆಚ್ಚುಗೆ ಸೂಚಿಸಿದ್ದರಂತೆ.
webdunia

ಅದೇ ಉತ್ಸಾಹದಿಂದ ಚಿತ್ರೀಕರಣ ಮುಗಿಸಿಕೊಂಡಿದ್ದ ಬ್ರಹ್ಮಾನಂದಂ ಈ ಚಿತ್ರದ ಬಗ್ಗೆ ತುಂಬಾನೇ ಭರವಸೆ ಇಟ್ಟುಕೊಂಡಿದ್ದಾರೆ. ಈ ತಿಂಗಳ ಹದಿನಾಲಕ್ಕನೇ ತಾರೀಕಿನಂದು ಬ್ರಹ್ಮಾನಂದಂ ಪಾತ್ರವೂ ಸೇರಿದಂತೆ ಐ ಲವ್ ಯೂ ಚಿತ್ರದ ಎಲ್ಲ ನಿಗೂಢಗಳೂ ಬಯಲಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಚಿತಾ ರಾಮ್‌ಗೆ ಹೊಸಾ ಇಮೇಜ್ ಕೊಟ್ಟ ಐ ಲವ್ ಯೂ!