ರಚಿತಾ ರಾಮ್‌ಗೆ ಹೊಸಾ ಇಮೇಜ್ ಕೊಟ್ಟ ಐ ಲವ್ ಯೂ!

ಗುರುವಾರ, 6 ಜೂನ್ 2019 (13:53 IST)
ಸೀರಿಯಲ್ ಲೋಕದ ಮೂಲಕ ನಟಿಯಾಗಿ ರೂಪುಗೊಂಡು ಸ್ಯಾಂಡಲ್‌ವುಡ್ ತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟವರು ರಚಿತಾ ರಾಮ್. ಹಾಗೆ ಏಕಾಏಕಿ ಬಿಗ್ ಸ್ಟಾರ್ ಚಿತ್ರಕ್ಕೆ ನಾಯಕಿಯಾಗಿ ಸಾಗಿ ಬಂದಿರೋ ರಚಿತಾ ಅಂದರೆ ಹೋಮ್ಲಿ ಲುಕ್ಕಿನ ನಟಿ ಎಂದೇ ಹೆಸರುವಾಸಿ. ಆದರೆ ಐ ಲವ್ ಯೂ ಚಿತ್ರದಲ್ಲಿ ಮಾತ್ರ ಅವರು ಈವರೆಗಿನ ಇಮೇಜಿಗೆ ತದ್ವಿರುದ್ಧವಾದ ಪಾತ್ರದಲ್ಲಿ ನಟಿಸಿದ್ದಾರೆ.
ಇಂಥಾದ್ದೊಂದು ಸೂಚನೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಸಿಕ್ಕಿ ಹೋಗಿತ್ತು. ಈ ಟ್ರೈಲರ್ ಬಿಡುಗಡೆಯಾಗಿ ದಿನ ಕಳೆಯೋದರೊಳಗೆ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡಿತ್ತು. ಅದರಲ್ಲಿಯೂ ಈ ಟ್ರೈಲರ್ಗೆ ಸಂಬಂಧಿಸಿದಂತೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ರಚಿತಾ ರಾಮ್ ಕಾಣಿಸಿಕೊಂಡಿರೋ ಕೆಲ ಸೀನುಗಳ ಸ್ಯಾಂಪಲ್. ಅವುಗಳಲ್ಲಿ ರಚಿತಾ ಈ ಹಿಂದೆಂದೂ ನಟಿಸಿರದಂತೆ ತೀರಾ ರೊಮ್ಯಾಂಟಿಕ್ ಮತ್ತು ಬೋಲ್ಡ್ ದೃಷ್ಯಗಳಲ್ಲಿ ಕಾಣಿಸಿಕೊಂಡಿದ್ದರು.
ಈ ವರೆಗೂ ರಚಿತಾ ಹಾಟ್ ಸನ್ನಿವೇಶಗಳಲ್ಲಿ ನಟಿಸಿದವರೇ ಅಲ್ಲ. ಅಂಥಾ ರಚಿತಾ ಐ ಲವ್ ಯೂ ಮೂಲಕ ಆ ಮನಸು ಮಾಡಿದ್ದಾರೆಂದರೆ ಖಂಡಿತಾ ಅದಕ್ಕೊಂದು ಕಾರಣ ಇದ್ದೇ ಇರುತ್ತೆ. ರಚಿತಾ ಅವರೇ ಈ ಬಗ್ಗೆ ಮಾತಾಡಿದ್ದಾರೆ. ಈ ಚಿತ್ರದಲ್ಲಿ ಅವರು ನಟಿಸಿರೋ ದೃಷ್ಯಾವಳಿಗಳನ್ನು ಕಂಡು ಅವರೇ ಕಂಗಾಲಾಗಿದ್ದರಂತೆ. ಹಾಗೆಂದ ಮೇಲೆ ಉಳಿದವರಿಗೆಲ್ಲ ಇಂಥಾ ಭಾವನೆ ಮೂಡಿರೋದರಲ್ಲಿ ವಿಶೇಷವೇನೂ ಇಲ್ಲ.
ಆದರೆ ರಚಿತಾ ರಾಮ್ ಹೀಗೆ ಹಾಟ್ ಲುಕ್ಕಿನಲ್ಲಿ ಕಾಣಂಇಸಿಕೊಂಡಿರೋದರ ಹಿಂದೆ ನಿಖರವಾದ ಕಾರಣವೊಂದಿದೆ. ಅದು ಒಟ್ಟಾರೆ ಈ ಚಿತ್ರದ ಸರ್ಪ್ರೈಸ್ಗಳಲ್ಲೊಂದು. ಅದು ಎಲ್ಲ ಪ್ರೇಕ್ಷಕರಿಗೂ, ರಚಿತಾಭಿಮಾನಿಗಳಿಗೂ ಕನ್ವಿನ್ಸ್ ಮಾಡುವಂತೆ ಇರಲಿದೆಯಂತೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಭಿಮಾನಿಗಳಲ್ಲೀಗ ಹಳೇ ಉಪ್ಪಿ ಮತ್ತೆ ಸಿಕ್ಕ ಸಂಭ್ರಮ!