Select Your Language

Notifications

webdunia
webdunia
webdunia
webdunia

ಅಭಿಮಾನಿಗಳಲ್ಲೀಗ ಹಳೇ ಉಪ್ಪಿ ಮತ್ತೆ ಸಿಕ್ಕ ಸಂಭ್ರಮ!

ಅಭಿಮಾನಿಗಳಲ್ಲೀಗ ಹಳೇ ಉಪ್ಪಿ ಮತ್ತೆ ಸಿಕ್ಕ ಸಂಭ್ರಮ!
ಬೆಂಗಳೂರು , ಗುರುವಾರ, 6 ಜೂನ್ 2019 (13:50 IST)
ಉಪೇಂದ್ರ ನಾಯಕನಾಗಿ ನಟಿಸಿರುವ ಐ ಲವ್ ಯೂ ಚಿತ್ರ ಅವರ ಅಭಿಮಾನಿಗಳೆಲ್ಲರೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಯಾಕೆಂದರೆ, ಉಪೇಂದ್ರ ಯಾವ ಶೈಲಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರೋ ಅದೇ ಶೈಲಿಯ ಡೈಲಾಗುಗಳ ಝಲಕ್ಕುಗಳನ್ನು ಕಂಡು ಅಭಿಮಾನಿಗಳೆಲ್ಲ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮೂಲಕವೇ ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಈ ಎರಡನೇ ಕಾಂಬಿನೇಷನ್ ಕಮಾಲ್ ಸೃಷ್ಟಿಸೋ ಲಕ್ಷಣಗಳೇ ದಟ್ಟೈಸಿವೆ!
ಉಪೇಂದ್ರ ಹಾಗೂ ಆರ್ ಚಂದ್ರು ವರ್ಷಾಂತರಗಳ ಹಿಂದೆ ಬ್ರಹ್ಮ ಅಂತೊಂದು ಅದ್ದೂರಿ ಚಿತ್ರವನ್ನು ಕೊಟ್ಟಿದ್ದರು. ಆ ಚಿತ್ರವೂ ಯಶಸ್ವಿಯಾಗಿತ್ತು. ಇಂಥಾ ಹಿಟ್ ಸಿನಿಮಾ ಕೊಟ್ಟ ಜೋಡಿ ಮತ್ತೆ ಒಂದಾಗಿದೆ ಅನ್ನೋ ಕಾರಣದಿಂದಲೇ ಐ ಲವ್ ಯೂ ಬಗ್ಗೆ ಈ ಥರದ ಸಂಚಲನ ಸೃಷ್ಟಿಯಾಗಿದೆ. ಈ ಚಿತ್ರದಲ್ಲಿ ಚಂದ್ರು ಅವರು ಉಪೇಂದ್ರರ ಹಳೇ ಇಮೇಜಿಗೆ ಹೊಸಾ ರೀತಿಯಲ್ಲಿ ಪಾಲಿಶ್ ಮಾಡಿರೋದೂ ಕೂಡಾ ಈಗಾಗಲೇ ಸ್ಪಷ್ಟವಾಗಿವೆ.
 
ಪ್ರೀತಿ ಪ್ರೇಮಗಳ ಬಗ್ಗೆ ಗಂಡೈಕಳ ಮನೋಭೂಮಿಕೆಗೆ ತಕ್ಕುದಾದ ಡೈಲಾಗುಗಳ ಮೂಲಕವೇ ಪ್ರಚಲಿತಕ್ಕೆ ಬಂದಿದ್ದವರು ಉಪ್ಪಿ. ಅವರ ಈ ಪ್ರೇಮದ ಫಿಲಾಸಫಿ ಜನರೇಷನ್ನಿನಿಂದ ಜನರೇಷನ್ನಿಗೆ ಯಥಾವತ್ತಾಗಿ ಮುಂದುವರೆದುಕೊಂಡು ಸಾಗುತ್ತಿದೆ. ದಶಕಕ್ಕೂ ಹಿಂದೆ ಉಪ್ಪಿ ಸೃಷ್ಟಿಸಿದ್ದ ಹಿಸ್ಟರಿಯೇ ಐ ಲವ್ ಯೂ ಮೂಲಕ ಮತ್ತೆ ಲಕಲಕಿಸುತ್ತದೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ.
webdunia
ಹಾಗಂತ ಇಡೀ ಐ ಲವ್ ಯೂ ಚಿತ್ರವೇ ಇಂಥಾ ಉಪ್ಪಿ ಶೈಲಿಯಲ್ಲಿದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಆರಂಭದಲ್ಲಿ ಚಿತ್ರ ಉಪ್ಪಿ ಸ್ಟೈಲಿನಲ್ಲಿಯೇ ತೆರೆದುಕೊಳ್ಳುತ್ತದೆ. ಆ ನಂತರ ಹಾಗೇ ಸಾಗಿ ಬಂದು ನಂತರ ಪಕ್ಕಾ ಆರ್ ಚಂದ್ರು ಶೈಲಿಯಲ್ಲಿ ವಿಲೀನಗೊಳ್ಳುತ್ತದೆ. ಇದರ ಕ್ಲೈಮ್ಯಾಕ್ಸ್ ಗೆ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಚಿತ್ರದ ಶೈಲಿಯೇ ಇರಲಿದೆಯಂತೆ. ಇದೆಲ್ಲದರಾಚೆಗೆ ಫ್ಯಾಮಿಲೆ ಸೆಂಟಿಮೆಂಟ್ ಮತ್ತು ಅಮೂಲ್ಯವಾದೊಂದು ಸಂದೇಶವೂ ಈ ಚಿತ್ರದಲ್ಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಐ ಲವ್ ಯೂ ಪಾತ್ರಗಳ ಬಗ್ಗೆ ಕಿಚ್ಚನಿಗೇ ಕುತೂಹಲ!